
ಸರಕಾರಿ ಪದವಿಪೂರ್ವ ಕಾಲೇಜಿನಲ್ಲಿ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿದ್ದ ನಾಗರಾಜ್ (67)ರವರು ಅಸೌಖ್ಯದಿಂದ ದಿನಾಂಕ 19.05.2025 ರಂದು ವಿಧಿವಶರಾಗಿದ್ದಾರೆ.ಮೂಲತಃ ಮೈಸೂರಿನ ನಂಜನಗೂಡಿನವರಾಗಿದ್ದ ಇವರು, ಚಿಕ್ಕಮಗಳೂರು ಜಿಲ್ಲೆಯಲ್ಲಿ ಉಪನ್ಯಾಸಕರಾಗಿ ಸೇವೆಗೆ ಸೇರಿದ್ದು, ನಂತರ ಪ್ರಾಂಶುಪಾಲರಾಗಿ ಪದೋನ್ನತಿ ಹೊಂದಿ ದಿನಾಂಕ 05.09.2002 ರಿಂದ 19.11.2016ರ ವರೆಗೆ ಸರಕಾರಿ ಪದವಿ ಪೂರ್ವ ಕಾಲೇಜು, ಸಾಣೂರಿನಲ್ಲಿ ಪ್ರಾಂಶುಪಾಲರಾಗಿ ಸೇವೆಯನ್ನು ಸಲ್ಲಿಸಿದ್ದರು. ತಮ್ಮ ಸೇವಾವಧಿಯಲ್ಲಿ ಪ್ರಾಮಾಣಿಕವಾಗಿ,ಕರ್ತವ್ಯ ಬದ್ಧತೆಯಿಂದ ದುಡಿದಂತಹ, ಶಾಂತ ಸ್ವಭಾವದ,ಶಿಸ್ತಿನ,ಸರಳ ಸಜ್ಜನಿಕೆಯ ವ್ಯಕ್ತಿತ್ವವನ್ನು ಹೊಂದಿದ್ದು ಎಲ್ಲರ ಮನಸ್ಸನ್ನು ಗೆದ್ದಿದ್ದರು.2016 ರಲ್ಲಿ ಚಿಕ್ಕಮಗಳೂರು ಜಿಲ್ಲೆಯ ಪದವಿಪೂರ್ವ ಶಿಕ್ಷಣ ಇಲಾಖೆಗೆ ಉಪನಿರ್ದೇಶಕರಾಗಿ ಪದೋನ್ನತಿ ಹೊಂದಿದ್ದರು.ಬೀಳ್ಕೊಡುಗೆಯ ಸಂದರ್ಭದಲ್ಲಿ “ಇನ್ನಷ್ಟು ವರ್ಷ ಸಾಣೂರು ಕಾಲೇಜಿನಲ್ಲಿ ಸೇವೆ ಮಾಡುವ ಅವಕಾಶ ಸಿಕ್ಕಿದ್ದರೆ ನಾನು ಸಂತೋಷದಿಂದಲೇ ಸೇವೆ ಮಾಡುತ್ತಿದ್ದೆ” ಎಂದು ಸಾಣೂರಿನ ಬಗ್ಗೆ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದರು. ಅನೇಕ ಅಭಿಮಾನಿಗಳನ್ನು,ಆತ್ಮೀಯರನ್ನು, ವಿದ್ಯಾರ್ಥಿ ಬಳಗವನ್ನು ಆಗಲಿ ವಿಧಿವಶರಾಗಿರುವುದು ಎಲ್ಲರಿಗೂ ಆಘಾತವನ್ನು ಉಂಟುಮಾಡಿದೆ. ಈ ದುಃಖದ ಸಂದರ್ಭದಲ್ಲಿ ಅವರಿಗೆ ಸರಕಾರಿ ಪದವಿ ಪೂರ್ವ ಕಾಲೇಜು ಸಾಣೂರಿನ ಪ್ರಾಂಶುಪಾಲರು, ಉಪನ್ಯಾಸಕರು,ಕಾಲೇಜು ಅಭಿವೃದ್ಧಿ ಸಮಿತಿ,ಊರಿನ ಅಭಿಮಾನಿಗಳು ಹಾಗೂ ವಿದ್ಯಾರ್ಥಿ ಬಳಗವು ಸಂತಾಪವನ್ನು ಸೂಚಿಸುತ್ತದೆ.









