
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿಸಿ ಟ್ರಸ್ಟ್ ರಿ.ಕಾರ್ಕಳ ತಾಲುಕು ಸಾಣೂರು ವಲಯ, ಪ್ರಗತಿಬಂಧು ,ಜ್ಞಾನವಿಕಾಸ ಸ್ವಸಹಾಯ ಸಂಘಗಳ ಒಕ್ಕೂಟ ಸಾಣೂರು ವಲಯ ಹಾಗೂ ಸರಕಾರಿ ಸಾರ್ವಜನಿಕ ಆಸ್ಪತ್ರೆ ಕಾರ್ಕಳ ( ಎನ್ ಸಿ ಡಿ ವಿಭಾಗ) ಇವರ ಸಹಯೋಗದೊಂದಿಗೆ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಯವರಾದ ಡಾ ಡಿ .ವೀರೇಂದ್ರ ಹೆಗ್ಗಡೆಯವರ ಹುಟ್ಟು ಹಬ್ಬದ ನಿಮಿತ್ತ ಆರೋಗ್ಯ ತಪಾಸಣಾ ಕಾರ್ಯಕ್ರಮ ಆಯೋಜಿಸಿದ್ದು ಕಾರ್ಯಕ್ರಮವನ್ನು ಜಯಶ್ರೀ ವೈದ್ಯಾಧಿಕಾರಿಗಳು ಸರ್ಕಾರಿ ಸಾರ್ವಜನಿಕ ಆಸ್ಪತ್ರೆ ಕಾರ್ಕಳ ಇವರು ದೀಪ ಬೆಳಗಿಸಿ ಉದ್ಘಾಟಿಸಿ ಈ ದಿನ ಆಯೋಜಿಸಿರುವ ಕಾರ್ಯಕ್ರಮವು ಮುಂದೆ ಆಗಬಹುದಾದ ಅನಾಹುತ ಗಳನ್ನೂ ತಪ್ಪಿಸಲು ಮುಂಜಾಗೃತಾ ಕ್ರಮವಾಗಿ 30 ವಯಸ್ಸಿನ ಮೇಲಿನ ಎಲ್ಲರೂ ಬಿ.ಪಿ ಶುಗರ್ ಪರೀಕ್ಷೆ ಮಾಡಿಸಿಕೊಳ್ಳಬೇಕು ಇತರ ತಪಾಸಣೆ ಗೆ ಒಳಗಾಗಬೇಕು ಹಾಗೂ ಹೃದಯ ದ ಸಮಸ್ಯೆ ಆಗದಂತೆ ವಹಿಸಬೇಕಾದ ಮುಂಜಾಗೃತಾ ಕ್ರಮ ದ ಬಗ್ಗೆ ಮಾಹಿತಿ ನೀಡಿದರು . ಯೋಜನಾ ಅಧಿಕಾರಿ ಯವರು ಪೂಜ್ಯರ ಹುಟ್ಟುಹಬ್ಬದ ಪ್ರಯಕ್ತ ಆಯೋಜಿಸಿದ ಕಾರ್ಯಕ್ರಮದ ಸದುಪಯೋಗ ಪಡೆದುಕೊಳ್ಳುವಂತೆ ಮಾಹಿತಿ ನೀಡಿರುತ್ತಾರೆ. ಅಧ್ಯಕ್ಷತೆಯನ್ನು ರಾಜೇಶ್ ಸಾಂಸ್ಕೃತಿಕ ಕಾರ್ಯದರ್ಶಿ ಯುವಕ ಮಂಡಲ ಸಾಣೂರು ಇವರು ವಹಿಸಿಕೊಂಡಿರುತ್ತಾರೆ.
ಕಾರ್ಯಕ್ರಮದಲ್ಲಿ ವಲಯದ ಮೇಲ್ವಿಚಾರಕರು ಸುಶೀಲ ಜ್ಞಾನ ವಿಕಾಸ ಸಮನ್ವಯ ಅಧಿಕಾರಿ ಸವಿತಾ ,ಸೇವಾ ಪ್ರತಿನಿಧಿಗಳು ಪುಷ್ಪಲತ ಅರುಣಿ ,ಶೋಭಾ,ಅನಿತಾ, ಶೌರ್ಯ ಘಟಕ ಪ್ರತಿನಿಧಿ ಮಾಧವ ಭಂಡಾರ್ಕರ್, ಶೌರ್ಯ ಸ್ವಯಂ ಸೇವಕರು ಆಸ್ಪತ್ರೆಯ ncd ವಿಭಾಗದ ಸಿಬ್ಬಂದಿಗಳು, ಉಪಸ್ಥಿತಿ ಇದ್ದರು . 120 ಜನ ಸದಸ್ಯರು ವಿವಿಧ ಆರೋಗ್ಯ ತಪಾಸಣೆ ಮಾಡಿಕೊಂಡರು.



















