ಹಾಗೂ ನಿವೃತ್ತ ಮುಖ್ಯ ಶಿಕ್ಷಕರ ಬೀಳ್ಕೊಡುಗೆ ಸಮಾರಂಭ.

ಸರಕಾರಿ ಪ್ರೌಢ ಶಾಲೆ, ಕಲ್ಯಾ ಇಲ್ಲಿ 2023- 2024ರ ಎಪ್ರಿಲ್ ನಲ್ಲಿ 100% ಫಲಿತಾಂಶ ದಾಖಲಿಸಿದ ಸಾಧಕ ವಿದ್ಯಾರ್ಥಿಗಳಿಗೆ ಹಾಗೂ NMMS ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ವಾರ್ಷಿಕ ರೂ. 12,000 ಶಿಷ್ಯ ವೇತನಕ್ಕೆ ಭಾಜನರಾದ 07 ವಿದ್ಯಾರ್ಥಿಗಳಿಗೆ ಅಭಿನಂದನಾ ಸಮಾರಂಭ ಹಾಗೂ 12 ವರ್ಷ ಮುಖ್ಯ ಶಿಕ್ಷಕರಾಗಿ ಅನುಪಮ ಸೇವೆ ಸಲ್ಲಿಸಿ ಸೇವೆಯಿಂದ ವಯೋನಿವೃತ್ತಿ ಹೊಂದಿದ ಶ್ರೀಮತಿ ಸುಮನಾ ಇವರ ಬೀಳ್ಕೊಡುಗೆ ಸಮಾರಂಭವು ಸನ್ಮಾನ್ಯ ಶಾಸಕರಾದ ಶ್ರೀ ವಿ. ಸುನಿಲ್ ಕುಮಾರ್ ಇವರ ಘನ ಉಪಸ್ಥಿತಿಯಲ್ಲಿ ನಡೆಯಿತು.
ಈ ಸಾಧನೆಗೆ ಕಾರಣರಾದ ಮುಖ್ಯಶಿಕ್ಷಕರು ,ಹಾಗೂ ಅಧ್ಯಾಪಕ ವೃಂದವನ್ನು ಸನ್ಮಾನಿಸಲಾಯಿತು. SDMC ಅಧ್ಯಕ್ಷರಾದ ಶ್ರೀ ಹರೀಶ್ ಕುಮಾರ್ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.
ಕಲ್ಯಾ ಗ್ರಾಮ ಪಂಚಾಯತ್ ಅಧ್ಯಕ್ಷೆ ಕುl ಪೂಜಾ, ಉಪಾಧ್ಯಕ್ಷ ಶ್ರೀ ಹರಿಜೀವನ್ ಶೆಟ್ಟಿ, ವಾರ್ಡ್ ಸದಸ್ಯರಾದ ಶ್ರೀ ಸಂಜೀವ ಶೆಟ್ಟಿ, ಶ್ರೀಮತಿ ಪ್ರೇಮಾ, ಶ್ರೀ ಜಗದೀಶ ಆಚಾರ್ಯ, ಸದಸ್ಯರಾದ ಶ್ರೀಮತಿ ಸುಪ್ರಿಯಾ ಕೋಟ್ಯಾನ್ ಅತಿಥಿಗಳಾಗಿದ್ದರು. ಸಾರ್ವಜನಿಕ ಶಿಕ್ಷಣ ಇಲಾಖೆಯ ಪ್ರಾಥಮಿಕ ಶಿಕ್ಷಣ ನಿರ್ದೇಶಕರಾದ ಮಾನ್ಯ ಶ್ರೀ ಸಿಪ್ರಿಯಾನ್ ಮೊಂತೇರೋ ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿದರು. ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ , ಉಡುಪಿಯ ಉಪ ಪ್ರಾಂಶುಪಾಲರಾದ ಶ್ರೀ ಅಶೋಕ್ ಕಾಮತ್ , ಉಪನ್ಯಾಸಕರಾದ ಶ್ರೀ ಸುಬ್ರಹ್ಮಣ್ಯ ಭಟ್, ಕಾರ್ಕಳದ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಶ್ರೀ ಲೋಕೇಶ್, ಬ್ಯಾಂಕ್ ಆಫ್ ಬರೋಡಾದ ನಿವೃತ್ತ ಜನರಲ್ ಮ್ಯಾನೇಜರ್ ಶ್ರೀ ಶಶಿಧರ ರಾವ್, ಕೆ.ವಿ.ಜಿ.ಬ್ಯಾಂಕಿನ ನಿವೃತ್ತ ರೀಜನಲ್ ಮ್ಯಾನೇಜರ್ ಶ್ರೀ ಜಗದೀಶ್ ರಾವ್, ನಿಟ್ಟೆ ವಿದ್ಯಾಸಂಸ್ಥೆಯ ರಿಜಿಸ್ಟ್ರಾರ್ ಶ್ರೀ ಯೋಗೀಶ್ ಹೆಗ್ಡೆ, ಬೀಳ್ಕೊಡುಗೆ ಪಡೆದ ನಿವೃತ್ತ ಮುಖ್ಯ ಶಿಕ್ಷಕಿ ಶ್ರೀಮತಿ ಸುಮನಾ , ಕೆನರಾ ಬ್ಯಾಂಕ್, ನಿಟ್ಟೆಯ ಪ್ರಬಂಧಕರಾದ ಶ್ರೀಮತಿ ಕಾರ್ತಿಕಾ , ಕಾರ್ಕಳ ತಾಲೂಕು ಮುಖ್ಯ ಶಿಕ್ಷಕರ ಸಂಘದ ಅಧ್ಯಕ್ಷ ಶ್ರೀ ಸಂಜೀವ ಪೂಜಾರಿ, ಜಿಲ್ಲಾ ಸಹ ಶಿಕ್ಷಕರ ಸಂಘದ ಅಧ್ಯಕ್ಷ ಶ್ರೀ ಪ್ರಭಾಕರ ಶೆಟ್ಟಿ ಕೊಂಡಳ್ಳಿ ವೇದಿಕೆಯಲ್ಲಿದ್ದರು. ಕೆನರಾ ಬ್ಯಾಂಕಿನ CSR ನಿಧಿಯಿಂದ ಮಾಡಿದ ಶಾಲಾ ಪ್ರಾಂಗಣದ ಇಂಟರ್ಲಾಕ್ ನ್ನು ಶ್ರೀಮತಿ ಕಾರ್ತಿಕಾ ಉದ್ಘಾಟಿಸಿದರು. ಶುದ್ಧ ಕುಡಿಯುವ ನೀರಿನ ಘಟಕವನ್ನು ಶ್ರೀ ಶಶಿಧರ ರಾವ್ ಉದ್ಘಾಟಿಸಿದರು. ಬೋಳಾಸ್ ಕ್ಯಾಶ್ಯೂ ಫ್ಯಾಕ್ಟರಿ , ಕೆದಿಂಜೆಯ ಮಾಲಕರಾದ ಶ್ರೀ ದಾಮೋದರ ಕಾಮತ್ ಅವರು ಶಾಲಾ ಮಕ್ಕಳಿಗೆ ನೀಡಿದ ಸಮವಸ್ತ್ರವನ್ನು ವಿದ್ಯಾರ್ಥಿಗಳಿಗೆ ವಿತರಿಸಲಾಯಿತು. ಶ್ರೀ ಸುಧಾಕರ ಆಚಾರ್ಯ ಹಾಗೂ ಶ್ರೀಮತಿ ಶಾಲಿನಿ ಬಿ.ಎಸ್ ಇವರು ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ 14 ವಿದ್ಯಾರ್ಥಿಗಳಿಗೆ ನಗದು ಬಹುಮಾನ ವಿತರಿಸಿದರು. ಮುಖ್ಯ ಶಿಕ್ಷಕರಾದ ಶ್ರೀ ರಾಮ ಮೊಗೇರ್ ಸ್ವಾಗತಿಸಿ ಶ್ರೀಮತಿ ಪ್ರಸಾದಿನಿ ಹಾಗೂ ಶ್ರೀ ಗಣೇಶ್ ನಿರೂಪಿಸಿ ಶ್ರೀ ಚಂದ್ರಶೇಖರ್ ವಂದಿಸಿದರು.











