ಮಕ್ಕಳ “ಮೆಟ್ರಿಕ್ ಮೇಳ”

ಮಕ್ಕಳಲ್ಲಿ ವ್ಯವಹಾರ ಗಣಿತದ ಪರಿಕಲ್ಪನೆಯನ್ನು ಮೂಡಿಸುವ ಸಲುವಾಗಿ ಶಾಲೆಯಲ್ಲಿ ಮಕ್ಕಳ ‘ಮೆಟ್ರಿಕ್ ಮೇಳ’ವನ್ನು ಏರ್ಪಡಿಸಲಾಗಿತ್ತು.
ಈ ಕಾರ್ಯಕ್ರಮವನ್ನು ಶಾಲಾ ಎಸ್ಡಿಎಂಸಿಯ ಅಧ್ಯಕ್ಷರಾದ ಶ್ರೀಯುತ ನಾರಾಯಣ ಗುಡಿಗಾರ್ ರವರು ಉದ್ಘಾಟಿಸಿ ಮಕ್ಕಳಲ್ಲಿ ಗಣಿತದ ಜ್ಞಾನವನ್ನು ನಿತ್ಯ ಜೀವನದಲ್ಲಿ ಅಳವಡಿಸಿಕೊಳ್ಳುವುದಕ್ಕೆ ಇದೊಂದು ಸೂಕ್ತ ವೇದಿಕೆ ಎಂದು ತಿಳಿಸಿದರು.ಪೋಷಕರ ನೆರವಿನೊಂದಿಗೆ ಮಕ್ಕಳು ವಿವಿಧ ಸ್ತರಗಳಲ್ಲಿ ವ್ಯವಹಾರವನ್ನು ನಡೆಸಿದರು. ಮಾತ್ರವಲ್ಲದೆ ಅತ್ಯಂತ ಲವಲವಿಕೆಯಿಂದ ವಸ್ತುಗಳ ಮಾರಾಟದಲ್ಲಿ ಪಾಲ್ಗೊಂಡರು . ಮಕ್ಕಳ ಪೋಷಕರೆಲ್ಲರೂ ಶಾಲೆಗೆ ಆಗಮಿಸಿ ಮಕ್ಕಳೊಡನೆ ವ್ಯವಹಾರದಲ್ಲಿ ತೊಡಗಿಕೊಂಡು ಕಾರ್ಯಕ್ರಮವನ್ನು ಅತ್ಯಂತ ಯಶಸ್ವಿಗೊಳಿಸಿದರು. ಈ ಕಾರ್ಯಕ್ರಮದಲ್ಲಿ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಸ್ವಾತಿ ವಿ.ನಾಯಕ್, ಎಸ್ಡಿಎಂಸಿ ಯ ಉಪಾಧ್ಯಕ್ಷರಾದ ರೂಪ ಶೆಟ್ಟಿ, ಎ ಸ್ಡಿಎಂಸಿಯ ಸದಸ್ಯರುಗಳು,,ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮಿಯ್ಯಾರು ವಲಯಾಧ್ಯಕ್ಷರಾದ ಅಶ್ವಥ್ ನಾರಾಯಣ್, ಹಿರಿಯರಾದ ರಾಮಣ್ಣ ಗುಡಿಗಾರ್ ರವರು ಭಾಗವಹಿಸಿ ಮಕ್ಕಳನ್ನು ಪ್ರೋತ್ಸಾಹಿಸಿದರು.ಶಾಲಾ ಮುಖ್ಯ ಶಿಕ್ಷಕಿ ಶ್ರೀಮತಿ ಪ್ರಮೀಳಾ ಹಾಗೂ ಶಿಕ್ಷಕಿಯರಾದ ಶ್ರೀಮತಿ ಸುನೀತಾ ನಾಯಕ್, ಶ್ರೀಮತಿ ಅಶ್ವಿನಿ, ಶ್ರೀಮತಿ ಸೌಮ್ಯ ಹಾಗೂ ಕುಮಾರಿ ಸುಪ್ರೀತಾ ಮಕ್ಕಳಿಗೆ ಕಾರ್ಯಕ್ರಮ ನಡೆಸುವ ಕುರಿತು ಸೂಕ್ತ ಮಾರ್ಗದರ್ಶನ ನೀಡಿದರು.






