31.3 C
Udupi
Friday, February 20, 2026
spot_img
spot_img
HomeBlogಸರಕಾರಗಳು ಜನರಿಗೆ ಉದ್ಯೋಗದ ಅವಕಾಶ ಕಲ್ಪಿಸಬೇಕೆ ಹೊರತು ಉಚಿತ ಯೋಜನೆಯ ಘೋಷಣೆಯಲ್ಲ,

ಸರಕಾರಗಳು ಜನರಿಗೆ ಉದ್ಯೋಗದ ಅವಕಾಶ ಕಲ್ಪಿಸಬೇಕೆ ಹೊರತು ಉಚಿತ ಯೋಜನೆಯ ಘೋಷಣೆಯಲ್ಲ,

ರಾಜಕೀಯ ಪಕ್ಷಗಳ ಉಚಿತ ಕೊಡುಗೆಗಳ ಬಗ್ಗೆ ಸುಪ್ರೀಂ ಕೋರ್ಟ್ ಆಕ್ಷೇಪ

ನವದೆಹಲಿ:ಚುನಾವಣೆ ವೇಳೆಯಲ್ಲಿ ರಾಜಕೀಯ ಪಕ್ಷಗಳು ಘೋಷಣೆ ಮಾಡುವ ಉಚಿತ ಕೊಡುಗೆಗಳ ಬಗ್ಗೆ ಸುಪ್ರೀಂ ಕೋರ್ಟ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ.

ಉಚಿತ ಕೊಡುಗೆಗಳು ದೇಶದ ಆರ್ಥಿಕ ಅಭಿವೃದ್ಧಿಗೆ ಅಡ್ಡಿಯಾಗಲಿದ್ದು, ಇವುಗಳನ್ನು ಮರು ಪರಿಶೀಲನೆ ಮಾಡುವ ಎಚ್ಚರಿಕೆಯ ಸಂದೇಶ ರವಾನಿಸಿದೆ. ಉಚಿತ ಕೊಡುಗೆಗಳು ಅರ್ಹರಿಗೆ ಮಾತ್ರ ಸಿಗಬೇಕು . ಇಂತಹ ಘೋಷಣೆಗಳಿಂದ ರಾಜ್ಯ ಸರಕಾರಗಳು ಆರ್ಥಿಕ ಕೊರತೆ ಎದುರಿಸುತ್ತಿವೆ. ಸರಕಾರಗಳು ಜನರಿಗೆ ಉದ್ಯೋಗದ ಅವಕಾಶ ಕಲ್ಪಿಸಬೇಕೆ, ಹೊರತು ಉಚಿತ ಯೋಜನೆಯ ಘೋಷಣೆ ಮಾಡುವುದು ಸರಿಯಲ್ಲ ಎಂದು ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ಅವರನ್ನು ಒಳಗೊಂಡ ಪೀಠ ಆಕ್ಷೇಪ ವ್ಯಕ್ತಪಡಿಸಿದೆ.

ತಮಿಳುನಾಡು ಸರಕಾರ ರಾಜ್ಯದ ಎಲ್ಲಾ ಜನತೆಗೂ ಉಚಿತ ವಿದ್ಯುತ್ ಪೂರೈಕೆಗೆ ನಿರ್ಧರಿಸಿದ್ದು, ಒಂದು ವೇಳೆ ಇದು ಘೋಷಣೆಯಾದಲ್ಲಿ ಸಾವಿರಾರು ಕೋಟಿ ರೂಪಾಯಿ ನಷ್ಟ ಅನುಭವಿಸಬೇಕಾಗುತ್ತದೆ. ಆದರೆ 2024 ರಲ್ಲಿ ಕೇಂದ್ರ ಸರಕಾರ ರೂಪಿಸಿರುವ ವಿದ್ಯುತ್ ತಿದ್ದುಪಡಿ ಕಾಯ್ದೆ ವಿದ್ಯುತ್ ಉತ್ಪಾದನೆ ಮತ್ತು ವಿತರಣೆ ಕಂಪನಿಗಳು ಹೀಗೆ ಬಾರಿ ಪ್ರಮಾಣದ ನಷ್ಟಕ್ಕೆ ಒಳಗಾಗಲು ಬಿಡುವುದಿಲ್ಲ ಇದನ್ನು ಪ್ರಶ್ನಿಸಿ ತಮಿಳುನಾಡು ವಿದ್ಯುತ್ ವಿತರಣಾ ಸಂಸ್ಥೆ ಮೇಲ್ಮನವಿ ಸಲ್ಲಿಸಿತ್ತು.

.

spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page