
ನವದೆಹಲಿ: ಬಿಜೆಪಿ ಏನಾದರೂ ಲೋಕಸಭಾ ಚುನಾವಣೆಯಲ್ಲಿ ಭರ್ಜರಿ ಬಹುಮತ ಪಡೆದಿದ್ದರೆ ಸಂವಿಧಾನವನ್ನು ಬದಲಿಸುವ ಕೆಲಸದಲ್ಲಿ ತೊಡಗುತಿತ್ತು. ಸಂವಿಧಾನವು ಆರ್ ಎಸ್ ಎಸ್ ನಿಯಮಗಳ ಪುಸ್ತಕವಲ್ಲ ಎಂಬುದನ್ನು ಪ್ರಧಾನಿ ಅರ್ಥ ಮಾಡಿಕೊಳ್ಳಬೇಕು ಎಂದು ಸಂಸದ ಪ್ರಿಯಾಂಕ ಗಾಂಧಿ ತಮ್ಮ ಮೊದಲ ಭಾಷಣದಲ್ಲಿ ಆಡಳಿತ ಪಕ್ಷದ ವಿರುದ್ಧ ಕಿಡಿ ಕಾರಿದ್ದಾರೆ.
ಲೋಕಸಭೆಯಲ್ಲಿ ನಡೆದ ಸಂವಿಧಾನ ಕುರಿತು ಚರ್ಚೆಯ ವೇಳೆ ಸಂಸದೆ ಪ್ರಿಯಾಂಕ ಗಾಂಧಿ, ಭಾರತದ ಸಂವಿಧಾನ ಸಂಘದ ವಿಧಾನ ಅಲ್ಲ ಎಂಬುದನ್ನು ಪ್ರಧಾನಿ ಅರ್ಥ ಮಾಡಿಕೊಳ್ಳಬೇಕು. ಬಿಜೆಪಿ ವಿಭಜಕ ರಾಜಕೀಯದಲ್ಲಿ ತೊಡಗಿದೆ. ಪ್ರಧಾನಿ ಸಂವಿಧಾನವನ್ನು ಹಣೆಗೆ ಒತ್ತಿಕೊಳ್ಳುತ್ತಾರೆ. ಆದರೆ ಸಂಭಲ್ ಮತ್ತು ಹಾಥ್ರಸ್ ನಲ್ಲಿ ನ್ಯಾಯದ ವಿಷಯ ಬರುವಾಗ ಪ್ರಧಾನಿ ಹಣೆಯಲ್ಲಿ ಒಂದೇ ಒಂದು ನೆರಿಗೆ ಮೂಡಲಿಲ್ಲ. ಸಂವಿಧಾನ ನ್ಯಾಯ, ಒಗ್ಗಟ್ಟು ಮತ್ತು ಸ್ವಾತಂತ್ರ್ಯವನ್ನು ರಕ್ಷಿಸುವ ಕವಚವಾಗಿದೆ. ಹತ್ತು ವರ್ಷಗಳಿಂದ ಬಿಜೆಪಿ ನೇತೃತ್ವದ ಸರಕಾರ ಇದನ್ನು ಬದಲಾಯಿಸಲು ಪ್ರಯತ್ನಿಸುತ್ತಿದೆ ಎಂದರು.





