
ಮುಂಬೈ: ಸಂಘದ ಶತಮಾನೋತ್ಸವದ ಅಂಗವಾಗಿ ಮುಂಬೈನಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಆರ್‌ಎಸ್‌ಎಸ್ ಮುಖ್ಯಸ್ಥ ಡಾ. ಮೋಹನ್ ಭಾಗ್ವತ್ ‘ವಯಸ್ಸಾದ ಹೊರತಾಗಿಯೂ ಕೆಲಸ ಮಾಡುವಂತೆ ಸಂಘ ನನಗೆ ಕೇಳಿಕೊಂಡಿದ್ದು ಆರ್‌ಎಸ್‌ಎಸ್ ಸಂಘದ ನಿರ್ದೇಶನದಂತೆ ನಾನು ಕೆಲಸ ಮುಂದುವರಿಸುತ್ತಿದ್ದೇನೆ. ಸಂಘ ಸೂಚಿಸಿದಾಗ ಯಾವುದೇ ಕ್ಷಣದಲ್ಲಿ ಹುದ್ದೆಯಿಂದ ಕೆಳಗಿಳಿಯಲು ಸಿದ್ಧನಿದ್ದೇನೆ ಎಂದು ಹೇಳಿದರು.
75 ವರ್ಷ ಪೂರೈಸಿದ ಬಳಿಕ ಹುದ್ದೆ ವಹಿಸದೇ ಕೆಲಸ ಮಾಡುವುದು ಸಂಘದ ರೂಢಿ. ಆರ್‌ಎಸ್‌ಎಸ್ ಮುಖ್ಯಸ್ಥರ ಹುದ್ದೆಗೆ ಚುನಾವಣೆ ಇಲ್ಲ. ಪ್ರಾದೇಶಿಕ ಹಾಗೂ ವಿಭಾಗೀಯ ನಾಯಕರು ಆಯ್ಕೆ ಮಾಡುತ್ತಾರೆ ಎಂದು ಅವರು ಹೇಳಿದರು.
ಸಂಘವನ್ನು ಬ್ರಾಹ್ಮಣ ಸಂಘಟನೆ ಎಂದು ಕರೆಯಲಾಗಿದ್ದರೂ, ಇಲ್ಲಿ ಜಾತಿ ಆಧಾರಿತ ಪ್ರಾತಿನಿಧ್ಯವಿಲ್ಲ. ಎಸ್‌ಸಿ–ಎಸ್‌ಟಿ ಸೇರಿ ಎಲ್ಲ ಸಮುದಾಯದವರು ಸಂಘದಲ್ಲಿ ಮುನ್ನಡೆಯಲು ಅವಕಾಶವಿದ್ದು, ಸೇವೆ ಮತ್ತು ಕೆಲಸದ ಆಧಾರದಲ್ಲೇ ಸ್ಥಾನಮಾನ ದೊರೆಯುತ್ತದೆ ಎಂದು ಸ್ಪಷ್ಟಪಡಿಸಿದರು.



















