
ಕಾರ್ಕಳ : ಶ್ರೀ ಸತ್ಯಸಾರಮಣಿ ಹಲೇರಾ ಪಂಜುರ್ಲಿ ಮತ್ತು ಪರಿವಾರದೈವಗಳ ಕ್ಷೇತ್ರ ಸಮಿತಿ (ರಿ.) ಪುಲ್ಕೇರಿ ಇಂದಿರಾ ನಗರ ಸಾಣೂರು ಶ್ರೀ ನಾಗದೇವರ ಏಳನೇ ಪ್ರತಿಷ್ಠಾ ವರ್ಧಂತಿ ಪ್ರಯುಕ್ತ ಶ್ರೀ ಕ್ಷೇತ್ರದ ಪ್ರಧಾನ ಅರ್ಚಕರಾದ ಶ್ರೀ ಕೆ. ಕಿಶೋರ್ ಶಾಂತಿ ಇವರ ನೇತೃತ್ವದಲ್ಲಿ ಸಾಮೂಹಿಕ ಆಶ್ಲೇಷ ಬಲಿ ಹಾಗೂ ನಾಗ ಸಂದರ್ಶನವು ದಿನಾಂಕ 19.08.2025ನೇ ಮಂಗಳವಾರದಂದು ನಡೆಯಲಿದೆ.
ಬೆಳಗ್ಗೆ 08:05 ರಿಂದ ನಾಗ ಸಮಿತಿಯಲ್ಲಿ ದೇವತಾ ಪ್ರಾರ್ಥನೆ, ಪುಣ್ಯಹವಾಚನ, 10:05 ರಿಂದ ಸಾಮೂಹಿಕ ಆಶ್ಲೇಷ ಬಲಿ, ಪವಮಾನ ಸೂಕ್ತ ಹೋಮ, 11:30 ರಿಂದ ಮಹಾಪೂಜೆ, 12:05 ರಿಂದ ನಾಗ ಸಂದರ್ಶನ, ಮಧ್ಯಾಹ್ನ 12:30 ರಿಂದ ಪ್ರಸಾದ ವಿತರಣೆ ಹಾಗೂ 01:05 ರಿಂದ ಸಾರ್ವಜನಿಕ ಅನ್ನ ಸಂತರ್ಪಣೆ ನಡೆಯಲಿದೆ.ಈ ಪುಣ್ಯ ಕಾರ್ಯದಲ್ಲಿ ಭಕ್ತಾಭಿಮಾನಿಗಳು ಪಾಲ್ಗೊಂಡು ಶ್ರೀ ನಾಗದೇವರ ಸಿರಿಮುಡಿ ಗಂಧ ಪ್ರಸಾದ ಸ್ವೀಕರಿಸಿ ನಾಗದೇವರ ಕೃಪೆಗೆ ಪಾತ್ರರಾಗಬೇಕು ಎಂದು ಸಮಿತಿಯು ಪ್ರಕಟನೆಯಲ್ಲಿ ತಿಳಿಸಿದೆ