
. ಕಾರ್ಕಳ: ಶ್ರೀ ಶ್ರೀ ರವಿಶಂಕರ ವಿದ್ಯಾಮಂದಿರದ ಹಳೆ ವಿದ್ಯಾರ್ಥಿನಿ ಕುಮಾರಿ ಶ್ರೇಯಾ ನಾಯಕ್ 2024/25 ನೇ ಸಾಲಿನ ದ್ವಿತೀಯ ಪಿಯುಸಿ ವಿಜ್ಞಾನ(PCMB )ವಿಭಾಗದಲ್ಲಿ ನಡೆದ ಅಂತಿಮ ಪರೀಕ್ಷೆಯಲ್ಲಿ ಒಟ್ಟು 600 ಅಂಕಗಳಲ್ಲಿ 590 ಅಂಕಗಳನ್ನು ಪಡೆದು ಶೇಕಡಾ 98.33 ಅಂಕಗಳನ್ನು ಪಡೆದು ರಾಜ್ಯಕ್ಕೆ 10ನೇರ‍್ಯಾಂಕ್ ಪಡೆದಿರುತ್ತಾರೆ.- ಇವರನ್ನು ಶಾಲಾ ಆಡಳಿತ ಮಂಡಳಿಯ ಕೋಶಾಧಿಕಾರಿಯಾದ ಶ್ರೀಯುತ ದಿನೇಶ್ ಕಾಮತ್ ದಂಪತಿಗಳು ಶಾಲು ಹೊದಿಸಿ ಫಲ ಪುಷ್ಪಗಳನ್ನು ನೀಡಿ ಅಭಿನಂದಿಸಿರುತ್ತಾರೆ .ಶಾಲಾ ಪ್ರಾಂಶುಪಾಲರಾದ ಶ್ರೀಮತಿ ಸೋನಲ್ ಆರ್ .ಕಾಮತ್ ಹಾಗೂ ಶಿಕ್ಷಕ ವೃಂದದವರು ಅವರ ಮುಂದಿನ ಭವಿಷ್ಯ ಉಜ್ವಲವಾಗಲೆಂದು ಶುಭ ಹಾರೈಸಿರುತ್ತಾರೆ.



















