
ಕಾರ್ಕಳ: ಶ್ರೀ ಶ್ರೀ ರವಿಶಂಕರ ವಿದ್ಯಾಮಂದಿರದಲ್ಲಿ ದಿನಾಂಕ 01/07/2025ರಂದು ರಾಷ್ಟ್ರೀಯ ವೈದ್ಯರ ದಿನಾಚರಣೆ ಅಂಗವಾಗಿ ಶಾಲೆಯ 8ನೇ ತರಗತಿ ವಿದ್ಯಾರ್ಥಿಗಳು ವೈದ್ಯರಿಗೆ ಶುಭಾಶಯ ಪತ್ರಗಳನ್ನು ನೀಡಿ ಅವರ ನಿಸ್ವಾರ್ಥ ಸೇವೆಗೆ ಹೃದಯಪೂರ್ವಕ ಕೃತಜ್ಞತೆಗಳನ್ನು ಸಲ್ಲಿಸಿದರು.
ಈ ವಿಭಿನ್ನವಾದ ಕಾರ್ಯಕ್ರಮದಲ್ಲಿ ನಮ್ಮ ಸಂಸ್ಥೆಯ ವಿದ್ಯಾರ್ಥಿಗಳು ವಿವಿಧ ಪರಿಣತ ವೈದ್ಯರೊಂದಿಗೆ ಸಂವಾದವನ್ನು ನಡೆಸಿದರು.ಈ ಕಾರ್ಯಕ್ರಮದಲ್ಲಿ ನಮ್ಮ ಸಂಸ್ಥೆಯ ವಿದ್ಯಾರ್ಥಿಗಳು ಡಾ. ಶ್ರೇಯಾಂಶ್ ಪಡಿವಾಳ್, ಡಾ. ಪ್ರಶಾಂತ್ ಹೆಗ್ಡೆ, ಡಾ.ಶಿಲ್ಪಾ ಹೆಗ್ಡೆ,ಡಾ. ಕಾರ್ತಿಕ್ ರಾವ್ , ಡಾ. ಭರತೇಶ್, ಡಾ. ಪ್ರದೀಪ ಕಿಣಿ, ಡಾ. ಮೋಹನ್ ದಾಸ್ ಪ್ರಭು, ಡಾ.ಬಾಲಸುಬ್ರಮಣ್ಯ, ಡಾ.ಶೀತಲ್ , ಡಾ.ಗಣೇಶ್ ಕಾಮತ್ ರವರನ್ನು ಭೇಟಿಯಾಗಿ ವೈದ್ಯರ ದಿನನಿತ್ಯದ ಸವಾಲುಗಳನ್ನು ನಮ್ಮ ವಿದ್ಯಾರ್ಥಿಗಳು ಪ್ರಶ್ನಿಸಿದರು.ವಿಶೇಷವಾಗಿ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ ಎಲ್ಲಾ ವೈದ್ಯರುಗಳು ಉತ್ತಮವಾಗಿ ಸ್ಪಂದಿಸಿ,
ಈ ಕಾರ್ಯಕ್ರಮವನ್ನು ಅತ್ಯಂತ ಯಶಸ್ವಿಯಾಗಿ ನಡೆಸುವಲ್ಲಿ ಸಹಕರಿಸಿದರು. ಭಾಗವಹಿಸಿದ ಎಲ್ಲಾ ವೈದ್ಯರುಗಳಿಗೆ ಶಾಲಾ ಪ್ರಾಂಶುಪಾಲರು ಹಾಗೂ ಸಂಸ್ಥೆಯ ಪರವಾಗಿ ಅಭಿನಂದನೆಗಳು .