
ಶ್ರೀ ಶಿವಭಕ್ತ ಭಜನಾ ಮಂಡಳಿ (ರಿ)ದಾನ ಶಾಲೆ ಕಾರ್ಕಳ ವತಿಯಿಂದ ತಾರೀಕು 12.02.2026ನೇ ಗುರುವಾರ ಬೆಳಗ್ಗೆ 10.00 ಗಂಟೆಗೆ ಸರಿಯಾಗಿ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಅರ್ಚಕರಾದ ಶ್ರೀ ರಾಜೇಶ್ ಭಟ್ ಇವರ ನೇತೃತ್ವದಲ್ಲಿ ವರ್ಷಂಪ್ರತಿಯಂತೆ ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜೆ ನಡೆಯಲಿರುವುದು.ಹಾಗೂ ಮಧ್ಯಾಹ್ನ ಸಾರ್ವಜನಿಕ ಅನ್ನಸಂತರ್ಪಣೆ ಕಾರ್ಯಕ್ರಮವು ಜರಗಲಿರುವುದು.
ದಿನಾಂಕ 13.02.2026ನೇ ಶುಕ್ರವಾರ ಸರ್ವೈಕಾದಶಿಯಂದು ಬೆಳಿಗ್ಗೆ ಗಂಟೆ 6.51ಕ್ಕೆ ಆರಂಭಗೊಂಡು ದಿನಾಂಕ 14.02.2026ನೇ ಶನಿವಾರ ಬೆಳಿಗ್ಗೆ ಗಂಟೆ 6.51ರವರೆಗೆಅಹೋರಾತ್ರಿ ಭಜನಾ ಕಾರ್ಯಕ್ರಮ33ನೇ ವರ್ಷದ ಏಕಾಹ ಭಜನೆ ನಡೆಯಲಿರುವುದೆಂದು ಕಾರ್ಯಕ್ರಮದ ಆಯೋಜಕರು ಪ್ರಕಟನೆಯಲ್ಲಿ ತಿಳಿಸಿದ್ದಾರೆ



















