21.1 C
Udupi
Sunday, February 1, 2026
spot_img
spot_img
HomeBlogಶ್ರೀ ಭುವನೇಂದ್ರ ರೆಸಿಡೆನ್ಶಿಯಲ್ ಸ್ಕೂಲ್,

ಶ್ರೀ ಭುವನೇಂದ್ರ ರೆಸಿಡೆನ್ಶಿಯಲ್ ಸ್ಕೂಲ್,

ಹಾಗೂ ಇದರ ಪೂರ್ವ ವಿದ್ಯಾರ್ಥಿ ಸಂಘದ ಸಂಯುಕ್ತ ಆಶ್ರಯದಲ್ಲಿ “ಮಾರ್ಗದರ್ಶನ” ಕಾರ್ಯಕ್ರಮ

ಶ್ರೀ ಭುವನೇಂದ್ರ ರೆಸಿಡೆನ್ಶಿಯಲ್ ಸ್ಕೂಲ್, ಹಾಗೂ ಇದರ ಪೂರ್ವ ವಿದ್ಯಾರ್ಥಿ ಸಂಘದ ಸಂಯುಕ್ತ ಆಶ್ರಯದಲ್ಲಿ “ಮಾರ್ಗದರ್ಶನ” ಕಾರ್ಯಕ್ರಮವು ದಿನಾಂಕ 10 ಜನವರಿ 2026 ರಂದು ಬೆಳಿಗ್ಗೆ 9.00 ರಿಂದ 10.00 ಗಂಟೆಯವರೆಗೆ ಶಾಲೆಯಲ್ಲಿ ಯಶಸ್ವಿಯಾಗಿ ನಡೆಯಿತು.


ಈ ಕಾರ್ಯಕ್ರಮದಲ್ಲಿ ಶಾಲೆಯ ಪೂರ್ವ ವಿದ್ಯಾರ್ಥಿಯಾದ ಶ್ರೀ ಗಿರೀಶ್ ಕಾಮತ್ ಅವರು ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದರು. ಅವರು “ಪರೀಕ್ಷೆಗೆ ಪರಿಣಾಮಕಾರಿ ಅಧ್ಯಯನ ತಂತ್ರಗಳು” ಎಂಬ ವಿಷಯದ ಮೇಲೆ ವಿದ್ಯಾರ್ಥಿಗಳಿಗೆ ಅತ್ಯಂತ ಉಪಯುಕ್ತ ಹಾಗೂ ಪ್ರೇರಣಾದಾಯಕ ಮಾಹಿತಿಯನ್ನು ನೀಡಿದರು. ಸಮಯ ನಿರ್ವಹಣೆ, ಪಠ್ಯಾವಲೋಕನ ವಿಧಾನಗಳು, ಏಕಾಗ್ರತೆ, ಪುನರಾವರ್ತನೆ ತಂತ್ರಗಳು ಹಾಗೂ ಪರೀಕ್ಷಾ ಆತಂಕವನ್ನು ಎದುರಿಸುವ ವಿಧಾನಗಳ ಕುರಿತು ಸ್ಪಷ್ಟವಾಗಿ ವಿವರಿಸಿದರು.
ಕಾರ್ಯಕ್ರಮದಲ್ಲಿ ಶಾಲೆಯ ಆಡಳಿತ ಮಂಡಳಿಯ ಸದಸ್ಯರು, ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ವಿದ್ಯಾರ್ಥಿಗಳು ಉತ್ಸಾಹದಿಂದ ಭಾಗವಹಿಸಿ ತಮ್ಮ ಸಂಶಯಗಳಿಗೆ ಉತ್ತರಗಳನ್ನು ಪಡೆದರು. ಈ ಮಾರ್ಗದರ್ಶನ ಕಾರ್ಯಕ್ರಮವು ವಿದ್ಯಾರ್ಥಿಗಳಿಗೆ ಆತ್ಮವಿಶ್ವಾಸ ಹೆಚ್ಚಿಸಿ, ಅಧ್ಯಯನದಲ್ಲಿ ಸರಿಯಾದ ದಿಕ್ಕನ್ನು ತೋರಿಸಿತು. ಆಂಗ್ಲ ಭಾಷಾ ಶಿಕ್ಷಕಿಯಾದ ಸೌಮ್ಯ ಸ್ವಾಗತಿಸಿದರು, ಗಣಿತ ಶಿಕ್ಷಕಿಯಾದ ಆರತಿ ಆಚಾರ್ಯ ವಂದನಾರ್ಪಣೆಯನ್ನು ಗೈದರು.

spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page