24.1 C
Udupi
Thursday, March 12, 2026
spot_img
spot_img
HomeBlogಶ್ರೀ ದುರ್ಗ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ, ಕಾರ್ಕಳ ಟೌನ್ ಪೊಲೀಸ್ ವತಿಯಿಂದ ವಿದ್ಯಾರ್ಥಿಗಳಿಗೆ "ತೆರೆದ...

ಶ್ರೀ ದುರ್ಗ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ, ಕಾರ್ಕಳ ಟೌನ್ ಪೊಲೀಸ್ ವತಿಯಿಂದ ವಿದ್ಯಾರ್ಥಿಗಳಿಗೆ “ತೆರೆದ ಮನೆ ಕಾರ್ಯಕ್ರಮ”

ಶ್ರೀ ದುರ್ಗಾ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ಇಲ್ಲಿ ಇಂದು ಕಾರ್ಕಳ ಟೌನ್ ಪೋಲೀಸ್ ವತಿಯಿಂದ ಶಾಲಾ ವಿದ್ಯಾರ್ಥಿಗಳಿಗಾಗಿ ತೆರೆದ ಮನೆ ಎಂಬ ಕಾರ್ಯಕ್ರಮವನ್ನು ಹಮ್ಮಿಕೊಂಡರು. ಟೌನ್ ಪೊಲೀಸ್ ಸ್ಟೇಷನ ನ ASI ಜಯಂತ್ ಮತ್ತು ಪೊಲೀಸ್ ಕಾನ್ಸ್ಟೇಬಲ್ ರಾದ ವಿನೋದ್ ರವರು ಆಗಮಿಸಿದ್ದರು. ಎಲ್ಲರನ್ನು ನಮ್ಮ ಶಾಲಾ ಮುಖ್ಯ ಶಿಕ್ಷಕರಾದ ಜಗದೀಶ್ ಹೆಗ್ಡೆಯವರು ಸ್ವಾಗತಿಸಿ ಪೋಲಿಸ್ ಹಾಗು ಮಕ್ಕಳ ಬಾಂಧವ್ಯದ ಬಗ್ಗೆ ಪ್ರಾಸ್ತಾವಿ ವಾಗಿ ಮಾತನಾಡಿದರು.


ಮಕ್ಕಳಲ್ಲಿ ಪೊಲೀಸರ ಬಗ್ಗೆ ಭಯದ ವಾತಾವರಣ ಕಾಳಜಿ ಅಗತ್ಯ ಬಿದ್ದಲ್ಲಿ ಸಂಪರ್ಕ ಹೊಂದುವಂತಹ ಮನೋಭಾವವನ್ನು ಬೆಳೆಸಿಕೊಳ್ಳುವಂತೆ ಹೇಳಿದರು. ಮಕ್ಕಳಿಗಾಗಿ ಮಕ್ಕಳ ಸಹಾಯವಾಣಿ ಸಂಖ್ಯೆ 1098 ಹಾಗೂ ಮಕ್ಕಳಿಗಾಗಿ ಇಲಾಖೆಯ ಸಹಾಯವಾಣಿ ಸಂಖ್ಯೆ 112 ನ್ನು ಅಗತ್ಯ ಸಂದರ್ಭದಲ್ಲಿ ಬಳಸುವಂತೆ ಸೂಚಿಸಿದರು. ಪೋಕ್ಸೋ ಪ್ರಕರಣ, ಬಾಲ್ಯ ವಿವಾಹ, ತಂಬಾಕು ಸೇವನೆ, ಬಾಲ ಕಾರ್ಮಿಕರ ಶೋಷಣೆ ಮುಂತಾದ ಸಮಾಜ ಬಾಹಿರ ಚಟುವಟಿಕೆಗಳಲ್ಲಿ ಮಕ್ಕಳನ್ನು ಕೊಳ್ಳುವುದು ಅಪರಾಧವೆಂದು ತಿಳಿಸಿದರು.
ಈ ಸಂದರ್ಭದಲ್ಲಿ ಎಲ್ಲಾ ಶಿಕ್ಷಕ ಶಿಕ್ಷಕಿಯರು ಹಾಗೂ ವಿದ್ಯಾರ್ಥಿಗಳು ಆಸಕ್ತಿಯಿಂದ ಭಾಗವಹಿಸಿದರು ಮುಖ್ಯ ಶಿಕ್ಷಕರು ಎಲ್ಲರಿಗೂ ಧನ್ಯವಾದ ನೀಡಿದರು. ಪೊಲೀಸ್ ಇಲಾಖೆ ವತಿಯಿಂದ ವಿದ್ಯಾರ್ಥಿಗಳಿಗೆ ಚಾಕಲೇಟ್ ವಿತರಿಸಿದರು.

spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page