77ನೇ ಗಣರಾಜ್ಯೋತ್ಸವ ದಿನಾಚರಣೆ

ಶ್ರೀ ದುರ್ಗಾ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ, ಕುಕ್ಕುಂದೂರು ಇಲ್ಲಿ ಇಂದು 77ನೇ ಗಣರಾಜ್ಯೋತ್ಸವ ದಿನವನ್ನು ಆಚರಿಸಲಾಯಿತು. ಮುಂಜಾನೆಯ ಧ್ವಜಾರೋಹಣ ಕಾರ್ಯಕ್ರಮವನ್ನು ಶಾಲಾಭಿಮಾನಿ ಉದ್ಯಮಿ ಶ್ರೀಯುತ ರೋ ಟೋರಿಯನ್ ಚಂದ್ರಶೇಖರ ಹೆಗಡೆಯವರು ನೆರವೇರಿಸಿಕೊಟ್ಟು ಈ ದಿನದ ವಿಶೇಷತೆಯ ಬಗ್ಗೆ ಮಕ್ಕಳನ್ನು ಉದ್ದೇಶಿಸಿ ಮಾತನಾಡಿದರು.
ಈ ಸಂದರ್ಭದಲ್ಲಿ ಶಾಲಾ ಸಂಚಾಲಕರಾದ ರಾಧಾಕೃಷ್ಣ ಶೆಟ್ಟಿ ಯವರು ಉಪಸ್ಥಿತರಿದ್ದರು. ಪುರ ಮೆರವಣಿಗೆಗೆ ರೋಟರಿ ರಾಕ್ ಸಿಟಿ, ಕಾರ್ಕಳ ಇದರ ಅಧ್ಯಕ್ಷರಾದ ರೋ ಟೋರಿಯನ್ ಸುರೇಂದ್ರ ನಾಯಕ್ ರವರು ಚಾಲನೆ ನೀಡಿದರು ಹಾಗೂ ಮುಂದಿನ ಸಭಾ ಕಾರ್ಯಕ್ರಮ ಅವರ ಅಧ್ಯಕ್ಷತೆಯಲ್ಲಿ ನೆರವೇರಿತ್ತು. ಅತಿಥಿಗಳಾದ ಮುಖ್ಯ ಶಿಕ್ಷಕರಾದ ಜಗದೀಶ್ ಹೆಗ್ಡೆ, ಸಹ ಶಿಕ್ಷಕಿಯರಾದ ಗೀತಾ ಭಂಡಾರಿ, ಅನಿತಾ ವಜ್ರ ಕುಮಾರ್ ಹಾಗೂ ಹಳೆ ವಿದ್ಯಾರ್ಥಿ ಪದ್ಮಾವತಿ ಭಟ್ ರವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಜಗದೀಶ್ ಹೆಗಡೆಯವರು ಎಲ್ಲರನ್ನು ಸ್ವಾಗತಿಸಿದರು. ವಿಜೇತ ಮಕ್ಕಳಿಂದ ಭಾಷಣ ಹಾಗೂ ಸಂಗೀತ ಕಾರ್ಯಕ್ರಮ ನಡೆಯಿತು. ನಂತರ ನಡೆದ ಬಹುಮಾನ ಕಾರ್ಯಕ್ರಮವನ್ನು ಸಹ ಶಿಕ್ಷಕರಾದ ಉಮೇಶ್ ರವರು ನಡೆಸಿಕೊಟ್ಟರು. ಜಗದೀಶ್ ಹೆಗ್ಡೆ ಯವರ ವತಿಯಿಂದ ಎಲ್ಲರಿಗೂ ಬಾದಾಮಿ ಹಾಲು, ಬಿಸ್ಕೆಟ್ ,ಸಿಹಿ ತಿಂಡಿ ಜೊತೆಗೆ ವಿದ್ಯಾರ್ಥಿಗಳಿಗೆ ಬಹುಮಾನದ ವ್ಯವಸ್ಥೆಯನ್ನು ಮಾಡಿದ್ದರು. ಸಹ ಶಿಕ್ಷಕಿ ವೀಣಾ ರವರು ಕಾರ್ಯಕ್ರಮ ನಿರೂಪಿಸಿ ಸಹ ಶಿಕ್ಷಕಿ ವಿದ್ಯಾರವರು ಧನ್ಯವಾದವಿತ್ತಾರು.




















