ರೋಟರಿ ಕ್ಲಬ್ ಕಾರ್ಕಳ, ರಾಕ್ ಸಿಟಿ ಸಹಯೋಗದಲ್ಲಿ “ತಾಯಿ ಮತ್ತು ಮಗುವಿನ ಆರೋಗ್ಯ” ಕಾರ್ಯಕ್ರಮ

ಶ್ರೀ ದುರ್ಗಾ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ಕುಕ್ಕುಂದೂರು . ಇಲ್ಲಿ ಇಂದು ರೋಟರಿ ಕ್ಲಬ್ ಕಾರ್ಕಳ, ರಾಕ್ ಸಿಟಿ ಸಹಯೋಗದಲ್ಲಿ” ತಾಯಿ ಮತ್ತು ಮಗುವಿನ ಆರೋಗ್ಯ”ಎಂಬ ವಿಷಯದ ಕುರಿತು ಆರೋಗ್ಯ ಮಾಹಿತಿ ಕಾರ್ಯಕ್ರಮ ನೆರವೇರಿತು.
ವಲಯ ಸೇನಾನಿ ರೋ1 ಪ್ರಶಾಂತ ಬೆಳಿರಾಯ , ಕಾರ್ಯದರ್ಶಿಗಳಾದ ರೋ1 ಸುರೇಶ್ ನಾಯಕ್, ರೋಟರಿ ಆಸ್ಪತ್ರೆ ಕಾರ್ಕಳ ಇದರ ವೈದ್ಯಾಧಿಕಾರಿಗಳಾದ ಡಾಕ್ಟರ್ ಕೃಷ್ಣಾನಂದ ಮಲ್ಯ, ನಕ್ರೆ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಗಳಾದ ಡಾಕ್ಟರ್ ಶ್ರೀ ವಿದ್ಯಾ ಇವರು ವೇದಿಕೆಯಲ್ಲಿ ಉಪಸ್ಥಿತರಿದ್ದು ಕಾರ್ಯಕ್ರಮವನ್ನು ಉದ್ಘಾಟಿಸಲಾಯಿತು. ಡಾಕ್ಟರ್ ಕೃಷ್ಣಾನಂದ ಮಲ್ಯ ರವರು ಗರ್ಭಿಣಿ ಮಹಿಳೆಯರ ಆರೋಗ್ಯ, ಆಹಾರ ಪದ್ಧತಿ, ಪೌಷ್ಟಿಕಾಂಶಗಳ ಮಾಹಿತಿ, ಮಾನಸಿಕ ಆರೋಗ್ಯದ ಬಗ್ಗೆ ಸವಿವರವಾಗಿ ಮಾಹಿತಿ ನೀಡಿದರು . ಡಾಕ್ಟರ್ ಶ್ರೀ ವಿದ್ಯಾರವರು ಮಕ್ಕಳ ಆರೋಗ್ಯ, ಆಹಾರ ಪದ್ಧತಿ, ಪೌಷ್ಟಿಕತೆಯ ಅವಶ್ಯಕತೆಯ ಮಾಹಿತಿ ನೀಡಿದರು. ಡಾಕ್ಟರ್ ಕೃಷ್ಣಾನಂದ ಮಲ್ಯ ಹಾಗೂ ಡಾಕ್ಟರ್ ವಿದ್ಯಾರವರನ್ನು ರೋಟರಿ ಕ್ಲಬ್ ಕಾರ್ಕಳ, ರಾಕ್ ಸಿಟಿ ವತಿಯಿಂದ ಗೌರವಿಸಲಾಯಿತು. ರೋಟರಿ ಕ್ಲಬ್ ಕಾರ್ಕಳ, ರಾಕ್ ಸಿಟಿಯ ಅಧ್ಯಕ್ಷರಾದ ರೊಟೊರಿಯನ್ ಸುರೇಂದ್ರ ನಾಯಕ್ ರವರ ನಾಯಕತ್ವದಲ್ಲಿ ಕಾರ್ಯಕ್ರಮ ಸಂಯೋಜನೆಗೊಂಡು ಕಾರ್ಯಕ್ರಮವು ಅತ್ಯಂತ ಯಶಸ್ವಿಯಾಗಿ ನೆರವೇರಿತು. ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ ಎಲ್ಲಾ ಮಹಿಳೆಯರಿಗೆ ಹಣ್ಣು ಹಂಪಲು ಕ್ಲಬ್ ವತಿಯಿಂದ ವಿತರಿಸಿದರು.





