ಅಬಾಕಸ್ ಮತ್ತು ವೇದಗಣಿತದಲ್ಲಿ ಚಿನ್ನದ ಸಾಧನೆ

ಶ್ರೀ ಗುರುಕುಲ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ಮಾಳ ಇಲ್ಲಿ ಸುಮಾರು ಮೂರು ವರ್ಷಗಳಿಂದ ಉಚಿತವಾಗಿ ಜನರೇಶನ್ ನೆಕ್ಸ್ಟ್ ಅಬಾಕಸ್ ಮತ್ತು ವೇದಗಣಿತ ತರಗತಿಗಳನ್ನು ನಡೆಸುತ್ತಿದ್ದು ಈ ವರ್ಷ ನಡೆದ ರಾಜ್ಯಮಟ್ಟದ ಟೇಬಲ್ಸ್ ಸ್ಪರ್ಧೆಯಲ್ಲಿ 80 ವಿದ್ಯಾರ್ಥಿಗಳು ಭಾಗವಹಿಸಿದ್ದು ಅದರಲ್ಲಿ 10 ವಿದ್ಯಾರ್ಥಿಗಳು ಚಿನ್ನದ ಪದಕ ಪಡೆದಿರುತ್ತಾರೆ ಅವರಿಗೆ ಶಾಲಾ ವತಿಯಿಂದ ಗೌರವಿಸಲಾಯಿತು.
ಈ ಪರೀಕ್ಷೆಗಳನ್ನು ಜನರೇಶನ್ ನೆಕ್ಸ್ಟ್ ಇದರ ನಿರ್ದೇಶಕರಾದ ಗುರುರಾಜ್ ಹೆಗಡೆ ಇವರು ನಿರ್ವಹಿಸಿದ್ದು ಶಾಲಾ ಪರವಾಗಿ ಮತ್ತು ಆಡಳಿತ ಮಂಡಳಿಯ ಪರವಾಗಿ ಶುಭ ಹಾರೈಸಲಾಯಿತು. ಈ ಕಾರ್ಯಕ್ರಮದಲ್ಲಿ ಮುಖ್ಯ ಶಿಕ್ಷಕರು ಸಹ ಶಿಕ್ಷಕರು ಭಾಗವಹಿಸಿದ್ದರು.





