
ಶಿವಕೇಸರಿ ಫ್ರೆಂಡ್ಸ್ ಮುಡಾರು ಇದರ ಮೂರನೇ ವರ್ಷದ ಶನೈಶ್ಚರ ಪೂಜೆ ಹಾಗು ಧಾರ್ಮಿಕ ಸಭೆ ದಿನಾಂಕ 08/03/2025 ಶನಿವಾರ ಮುಡಾರು ಸನಾತನ ಕ್ರಿಡಾಂಗಣದಲ್ಲಿ ನಡೆಯಿತು.
ಮುಡ್ರಾಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಅರ್ಚಕರಾದ ಶ್ರೀ ರಾಮ್ ಭಟ್ ಕಲ್ಲೆಚ್ಚಿ ಇವರ ಮಾರ್ಗದರ್ಶನದಲ್ಲಿ ಶನೈಶ್ಚರ ಪೂಜೆ ನಂತರ ಗಣ್ಯರ ಉಪಸ್ಥಿತಿಯಲ್ಲಿ ಧಾರ್ಮಿಕ ಸಭೆ ನಡೆಯಿತು.ಕಾರ್ಯಕ್ರಮದ ಅಧ್ಯಕ್ಷತೆ ನೆಲೆಯಲ್ಲಿ ಮಹಾವೀರ್ ಜೈನ್ ಹಲೆಕ್ಕಿ ಮುಡಾರು ಮಾತನಾಡಿ ಶಿವಕೇಸರಿ ತಂಡದ ಕಾರ್ಯಕರ್ತರ ಹಿಂದು ಪರ ಹೋರಾಟ ಸಂಘಟನೆಯ ಬಗ್ಗೆ ಇರುವ ಬದ್ದತೆ ಹಾಗು ಗ್ರಾಮಿಣ ಭಾಗದಲ್ಲಿ ಬಲಿಷ್ಠ ಸಂಘಟನೆ ಸಂಘಟಿಸುವ ಕಾರ್ಯಕರ್ತರ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದರು .
ದಿಕ್ಸೂಚಿ ಭಾಷಣ ಮಾಡಿದ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಜಿಲ್ಲಾ ಪ್ರಮುಖರಾದ ಸತೀಶ್ ಕಾಳವರ್ಕರ್ ಹಿಂದೂ ಸಮಾಜ ಜಾಗೃತಿಗಾಗಿ ಸಮಾಜ ಒಗ್ಗಟ್ಟಾಗಿರುವ ಕುರಿತು ಸವಿವರವಾಗಿ ಮಾತನಾಡಿದರು.
ಮುಖ್ಯ ಅತಿಥಿಯಾಗಿಡಾ.ರವೀಂದ್ರ ಶೆಟ್ಟಿ ಶಿವಕೇಸರಿ ತಂಡದ ಸದಸ್ಯರು ಸಮಾಜಮುಖಿ ಚಟುವಟಿಕೆಗಳನ್ನು ಬೆಂಬಲಿಸಿದರು ಅತಿಥಿಗಳಾಗದ ಜಗನ್ನಾಥ್ ಶೆಟ್ಟಿ ಹಡ್ಯಾಲು ,ನಿತ್ಯಾನಂದ ಭೀಡೆ,ಸತ್ಯೇಂದ್ರ ನಾಯಕ್ ಮಿಯ್ಯಾರು,ಮಹೇಶ್ ಬೈಲೂರು,ಶೃತಿ ಡಿ ಅಧಿಕಾರಿ,ಶಿವಕೇಸರಿ ಫ್ರೆಂಡ್ಸ್ ನ ಅಧ್ಯಕ್ಷರಾದ ರಿತೇಶ್ ಪೂಜಾರಿಉಪಸ್ಥಿತರಿದ್ದರು.ರಮೇಶ್ ಕಲ್ಲೊಟ್ಟೆ ಕಾರ್ಯಕ್ರಮ ನಿರೂಪಣೆ ಮಾಡಿದರು.ಹರೀಶ್ ಕಿಚ್ಚ ಬಜಗೋಳಿ ಪ್ರಾಸ್ತಾವಿಕ ಮಾತಾನಾಡಿದರು ರೀತೇಶ್ ಪೂಜಾರಿ ಸ್ವಾಗತ ಮತ್ತು ಪೂರ್ಣೇಶ್ ಧನ್ಯವಾದ ಸಮರ್ಪಣೆಯೊಂದಿಗೆ ಸಭಾ ಕಾರ್ಯಕ್ರಮ ನಡೆಯಿತು ನಂತರ ಸ್ಥಳಿಯ ಪ್ರತಿಭೆಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಹಾಗು ಕಾರ್ಕಳ ಸಿಂಧೂರ ಕಲಾವಿದರಿಂದ ಡೊಂಬರಾಟ ನಾಟಕ ಅತ್ಯುತ್ತಮವಾಗಿ ನಡೆಯಿತು