
ಶಾರದಾ ಮಹಿಳಾ ಮಂಡಳಿ, ಅನಂತಶಯನ, ಕಾರ್ಕಳ ಇದರ ವತಿಯಿಂದ ಸ್ಥಳೀಯ ಪೆರ್ವಾಜೆ ಶಾಲೆಯ ಮಕ್ಕಳಿಗೆ ಒಂದು ದಿನದ ಬೇಸಿಗೆ ಶಿಬಿರವನ್ನು ನಡೆಸಲಾಯಿತು. ಸದಸ್ಯೆಯರಾದ ಶಶಿಕಲಾ ರಾವ್ ಮತ್ತು ಸೌಮ್ಯ ರಾವ್ ಇವರು ದಿನನಿತ್ಯ ಪಠಿಸುವ ಶ್ಲೋಕಗಳನ್ನು ಭಜನೆಗಳನ್ನು ಹೇಳಿಕೊಟ್ಟರು. ಡಾ| ಹರ್ಷ ಕಾಮತ್ ಬೇಸಿಗೆಯಲ್ಲಿ ಆರೋಗ್ಯವನ್ನು ಹೇಗೆ ಕಾಪಾಡಿಕೊಳ್ಳಬೇಕು ಎಂದು ತಿಳಿಸಿಕೊಟ್ಟರು.
ಸಾವಿತ್ರಿ ಮನೋಹರ್ ಇವರು ಸುತ್ತಮುತ್ತಲಲ್ಲಿ ಸಿಗುವ ಹೂವು ಎಲೆಗಳನ್ನು ಬಳಸಿ ಸುಂದರವಾದ ಪುಷ್ಪಗುಚ್ಛವನ್ನು ತಯಾರಿಸಲು ಹೇಳಿಕೊಟ್ಟರು. ವಿದ್ಯಾರ್ಥಿಗಳಿಗೆ ಗುಂಪಿನಲ್ಲಿ ಆಡಬಹುದಾದ ಒಂದೆರಡು ಆಟಗಳನ್ನು ಆಡಿಸಲಾಯಿತು. ಅಧ್ಯಕ್ಷೆ ಜ್ಯೋತಿ ಫಾಟಕ್ ಸ್ವಾಗತಿಸಿದ ಕಾರ್ಯಕ್ರಮದಲ್ಲಿ ಉಪಾಧ್ಯಕ್ಷೆ ಶ್ರೀಮತಿ ಸ್ವಾತಿ ಸಂತೋಷ್ ವಂದಿಸಿದರು. ಶಾರದಾ ಮಹಿಳಾ ಮಂಡಳಿಯ ಸದಸ್ಯೆಯರು ಹಾಗೂ ಶಾಲಾ ಅಧ್ಯಾಪಕ ವೃಂದದವರು ಉಪಸ್ಥಿತರಿದ್ದರು.








