
ಬೆಂಗಳೂರು: ಬಹುವಾರ್ಷಿಕ ದರ ಪರಿಷ್ಕರಣೆ ಕ್ರಮದಡಿ ವಿದ್ಯುತ್ ದರದಲ್ಲಿ ಕಡಿತ ಘೋಷಿಸಿದ್ದರೂ, ಗ್ರಾಹಕರಿಗೆ ಒಟ್ಟಾರೆ ಹೆಚ್ಚಳದ ಭಾರ ತಪ್ಪಿಲ್ಲ. ಕೆಇಆರ್‌ಸಿ ಆದೇಶದಂತೆ ವಾಣಿಜ್ಯ ಮತ್ತು ಕೈಗಾರಿಕಾ ಬಳಕೆದಾರರಿಗೆ ಯೂನಿಟ್‌ಗೆ 10 ರಿಂದ 20 ಪೈಸೆವರೆಗೆ ಕಡಿತ ನೀಡಲಾಗಿದೆ.
ಆದರೆ, ವಿದ್ಯುತ್ ನೌಕರರ ಪಿಂಚಣಿ ಹಾಗೂ ಗ್ರಾಚುಟಿ ಬಾಕಿ ಭಾರವನ್ನು ಗ್ರಾಹಕರ ಮೇಲೆ ಹಾಕಲಾಗಿದ್ದು, ಏಪ್ರಿಲ್ 1ರಿಂದ ಎಲ್ಲಾ ವರ್ಗಗಳಿಗೂ ಯೂನಿಟ್‌ಗೆ 35 ಪೈಸೆ ಹೆಚ್ಚುವರಿ ಶುಲ್ಕ ವಿಧಿಸಲಾಗಿದೆ. ಇದರಿಂದ ಒಟ್ಟಾರೆ ಲೆಕ್ಕದಲ್ಲಿ ಗ್ರಾಹಕರಿಗೆ 35 ರಿಂದ 45 ಪೈಸೆಯವರೆಗೆ ಹೆಚ್ಚಳವಾಗಲಿದೆ.
ಪ್ರಸ್ತುತ ಗೃಹ ಬಳಕೆದಾರರಿಗೆ ಯೂನಿಟ್‌ಗೆ ₹5.80, ವಾಣಿಜ್ಯಕ್ಕೆ ₹7, ಕೈಗಾರಿಕೆಗಳಿಗೆ ₹4.50 ಮತ್ತು ಎಚ್‌ಟಿ-1 ಬಳಕೆದಾರರಿಗೆ ₹6.60 ದರ ಇದೆ. ಎಸ್ಕಾಂಗಳ ಆರ್ಥಿಕ ಕೊರತೆಯನ್ನು ಸಮತೋಲನಗೊಳಿಸಲು ಈ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿದುಬಂದಿದೆ.









