
ವಿದ್ಯಾರ್ಥಿ ಬಂಧುತ್ವ ವೇದಿಕೆ ಕರ್ನಾಟಕ ಕಾರ್ಕಳ ಘಟಕ ಉಡುಪಿ ಜಿಲ್ಲೆ ವತಿಯಿಂದ ವಿಜೇತ ವಿಶೇಷ ಶಾಲೆಯಲ್ಲಿ ಸೌಹಾರ್ದ ಕ್ರಿಸ್ಮಸ್ ಆಚರಣೆ ಕಾರ್ಯಕ್ರಮ ನಡೆಸಿ, ಮಕ್ಕಳಿಗೆ ವಿಶೇಷ ಭೋಜನದ ವ್ಯವಸ್ಥೆ ಮಾಡಿದರು.

ಮುಖ್ಯ ಅತಿಥಿಗಳಾಗಿ ಚರ್ಚ್ ಪ್ರಮುಖರಾದ ಸಂತೋಷ್ ಡಿಸಿಲ್ವಾ, ಕಾರ್ಕಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಶುಭದ್ ರಾವ್ , ಉದ್ಯಮಿಗಳಾದ ಬ್ರಿಯಾನ್ ಪಾಯಸ ,ಲಯನ್ಸ್ ವಿಶೇಷ ಶಾಲೆ ಸುರತ್ಕಲ್ ಮುಖ್ಯೋಪಾಧ್ಯಾಯನಿ ಸೌಮ್ಯ ದೇವಾಡಿಗ , ಮಾನವ ಬಂಧುತ್ವ ವೇದಿಕೆ ಕರ್ನಾಟಕ ರಾಜ್ಯ ಸದಸ್ಯರಾದ ರೊನಾಲ್ಡ್ ಮನೋಹರ , ಮಾನವ ಬಂಧುತ್ವ ವೇದಿಕೆ ಕಾರ್ಕಳ ಸಂಚಾಲಕರಾದ ಸುಬೀತ್ ಕುಮಾರ್ ಎನ್ , ವಿದ್ಯಾರ್ಥಿ ಬಂಧುತ್ವ ವೇದಿಕೆ ಕಾರ್ಕಳ ಅಧ್ಯಕ್ಷರಾದ ನಿತೀಶ್ ಶೆಟ್ಟಿಗಾರ್ , ಕರಾವಳಿ ವಿಭಾಗೀಯ ಸಂಚಾಲಕರಾದ ಸತೀಶ್ ಕುಮಾರ್ ಕೆ.ಎಸ್ ಭಾಗವಹಿಸಿದರು.
ಸಂತೋಷ್ ಡಿಸಿಲ್ವಾ, ಬ್ರಿಯಾನ್ ಪಾಯಸ್ ಇವರ ವತಿಯಿಂದ ಮಕ್ಕಳ ಶ್ರೇಯೋಭಿವೃದ್ಧಿಗಾಗಿ ದೇಣಿಗೆ ಹಸ್ತಾಂತರಿಸಿದರು.
ಈ ಸಂದರ್ಭದಲ್ಲಿ ಅತಿಥಿಗಳಾಗಿ ಉಪಸ್ಥಿತರಿದ್ದು ಕೆ ಎಂ ಎಫ್ ಡೈರೆಕ್ಟರ್, ಮಾಜಿ ತಾಲೂಕು ಪಂಚಾಯತ್ ಸದಸ್ಯರಾದ ಸುಧಾಕರ್ ಶೆಟ್ಟಿ ದೇಣಿಗೆ ಹಸ್ತಾಂತರಿಸುವುದರೊಂದಿಗೆ ಹುಟ್ಟುಹಬ್ಬ ಆಚರಿಸಿದರು.
ಕಾರ್ಕಳ ಪುರಸಭಾ ನಾಮ ನಿರ್ದೇಶಿತ ಸದಸ್ಯರಾದ ವಿವೇಕಾನಂದ ಶೆಣೈ ದೇಣಿಗೆ ಹಸ್ತಾಂತರಿಸಿದರು.
ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಶಿಕ್ಷಕರಾದ ಜಾರ್ಜ್ ಕ್ಯಾಸ್ತಲಿನೊ, ಉದಿತ್ ಶೆಟ್ಟಿಗಾರ್, ಮಲ್ಲಿಕ್, ಪ್ರದೀಪ್ ಬೇಲಾಡಿ, ಸೂರಜ್ ಶೆಟ್ಟಿ ನಕ್ರೆ ಅಜಿತ್ ಹೆಗ್ಡೆ ಮಾಳ, ಯೋಗೀಶ್ ಆಚಾರ್ಯ, ಭಾನು ಭಾಸ್ಕರ್, ರಾಘವ್ ಮತ್ತಿತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ವಿಶೇಷ ಶಿಕ್ಷಕಿ ಶ್ರೀನಿಧಿ & ವಿಶೇಷ ಶಿಕ್ಷಕಿ ಹರ್ಷಿತಾ ನಿರೂಪಿಸಿದ ಕಾರ್ಯಕ್ರಮದಲ್ಲಿ ಡಾ. ಕಾಂತಿ ಹರೀಶ್ ಸ್ವಾಗತಿಸಿ ಸತೀಶ್ ಕುಮಾರ್ ಕೆ. ಎಸ್ ಪ್ರಾಸ್ತಾವಿಕ ನುಡಿಗಳನ್ನಾಡಿ ನಿತೀಶ್ ಶೆಟ್ಟಿಗಾರ್ ವಂದಿಸಿದರು.





