
ನಿಂಗ್ಬೊ: ವಿಶ್ವ ನಂ.1 ಕುನ್ಲಾವುತ್ ವಿಟಿರ್ಡನ್ಸ್ ಅವರನ್ನು ಸೋಲಿಸಿ ಆಯುಷ್ ಶೆಟ್ಟಿ 2026ರ ಬ್ಯಾಡ್ಮಿಂಟನ್ ಏಷ್ಯಾ ಚಾಂಪಿಯನ್‌ಶಿಪ್ ಫೈನಲ್‌ಗೆ ಪ್ರವೇಶಿಸಿದ್ದಾರೆ. ಶನಿವಾರ ನಡೆದ ಸೆಮಿಫೈನಲ್‌ನಲ್ಲಿ 20 ವರ್ಷದ ಭಾರತೀಯ ಆಟಗಾರ 10-21, 21-19, 21-17 ಅಂತರದಲ್ಲಿ ಅದ್ಭುತ ಗೆಲುವು ಸಾಧಿಸಿದರು.
ಮೊದಲ ಗೇಮ್‌ನಲ್ಲಿ ಸೋತ ಆಯುಷ್ ನಂತರ ಭರ್ಜರಿ ಕಮ್‌ಬ್ಯಾಕ್ ನೀಡಿ ಆಟವನ್ನು ಸಂಪೂರ್ಣವಾಗಿ ತನ್ನತ್ತ ತಿರುಗಿಸಿಕೊಂಡರು. ನಿರ್ಣಾಯಕ ಹಂತದಲ್ಲಿ ಹಿಡಿತ ಸಾಧಿಸಿ ಆಡಿದ ಅವರು ಮಹತ್ವದ ಜಯ ದಾಖಲಿಸಿದರು.
ಈ ಗೆಲುವಿನೊಂದಿಗೆ 1965ರ ಬಳಿಕ ಕಾಂಟಿನೆಂಟಲ್ ಈವೆಂಟ್‌ನಲ್ಲಿ ಪುರುಷರ ಸಿಂಗಲ್ಸ್ ಫೈನಲ್ ತಲುಪಿದ ಎರಡನೇ ಭಾರತೀಯರಾಗಿದ್ದಾರೆ. 2018ರಲ್ಲಿ ಎಚ್‌ಎಸ್ ಪ್ರಣಯ್ ನಂತರ ಈ ಸಾಧನೆ ಮಾಡಿದ ಮೊದಲ ಭಾರತೀಯರೂ ಆಗಿದ್ದಾರೆ.
ಉಡುಪಿ ಜಿಲ್ಲೆಯ ಸಾಣೂರಿನ ಆಯುಷ್ ಶೆಟ್ಟಿ ಟೂರ್ನಿಯಲ್ಲಿ ವಿಶ್ವ 7ನೇ ಶ್ರೇಯಾಂಕಿತ ಲಿ ಶಿ ಫೆಂಗ್ ಹಾಗೂ ಚಿನ್ ಯು ಜೆನ್ ಅವರನ್ನು ಸೋಲಿಸಿ ಸೆಮಿಗೆ ತಲುಪಿದರು. ಜೊತೆಗೆ ಕ್ವಾರ್ಟರ್ ಫೈನಲ್‌ನಲ್ಲಿ ವಿಶ್ವ 4ನೇ ಶ್ರೇಯಾಂಕಿತ ಜೊನಾಥನ್ ಕ್ರಿಸ್ಟಿ ವಿರುದ್ಧದ ಗೆಲುವು ಗಮನಸೆಳೆದಿದೆ.








