ಎಂ. ಆರ್.ಪಿ.ಎಲ್.ಸಿ.ಎಸ್.ಆರ್ ಪ್ರಾಯೋಜಕತ್ವದ “ಅನ್ನಪೂರ್ಣ ಪಾಕಶಾಲಾ ಉದ್ಘಾಟನೆ”

ಏಪ್ರಿಲ್ 9:ದಶಕ ವಿಜೇತೋತ್ಸವ ಸಮಾರಂಭ 2026ರ ಕಾರ್ಯಕ್ರಮ ಹಾಗೂ ಎಂ.ಆರ್.ಪಿ.ಎಲ್ ಸಿ.ಎಸ್.ಆರ್ ಪ್ರಾಯೋಜಕತ್ವದ ಅನ್ನಪೂರ್ಣ ಪಾಕಶಾಲಾ ಉದ್ಘಾಟನೆ ವಿಜೇತ ವಿಶೇಷ ಶಾಲೆ ಅಯ್ಯಪ್ಪನಗರದಲ್ಲಿ ವಿಜೃಂಭಣೆಯಿಂದ ನೆರವೇರಿತು.

ಎಂ.ಆರ್.ಪಿ.ಎಲ್ ಸಿ.ಎಸ್.ಆರ್ ಪ್ರಾಯೋಜಕತ್ವದ ಅನ್ನಪೂರ್ಣ ಪಾಕಶಾಲಾ ಕೊಠಡಿಯ ಉದ್ಘಾಟನೆಯನ್ನು ಮಾಜಿ ಸಚಿವರು, ಕರ್ನಾಟಕ ಸರಕಾರ ಕೆ. ಜಯಪ್ರಕಾಶ್ ಹೆಗ್ಡೆ ನೆರವೇರಿಸಿ ಎಂ.ಆರ್.ಪಿ.ಎಲ್ ಸಂಸ್ಥೆಗೆ ಅಭಿನಂದಿಸಿ ಶುಭಹಾರೈಸಿದರು .
ಶ್ರೀ ಜಯವಿಭವ ಸ್ವಾಮಿ IAS ನಿವೃತ್ತ ಕಾರ್ಯನಿರ್ವಾಹಕ ನಿರ್ದೇಶಕರಾದ, ಶ್ರೀ ಸಿದ್ದ ಗಂಗಾಮಠ ಮತ್ತು ಸಮೂಹ ಸಂಸ್ಥೆಗಳು ತುಮಕೂರು ಇವರು ದೀಪ ಪ್ರಜ್ವಲಿಸಿ ಸಂಸ್ಥೆಯ ಕಾರ್ಯವೈಕಾರಿಯವನ್ನು ಶ್ಲಾಘಿಸಿ ಅಭಿನಂದಿಸಿದರು.

ಸಭಾಧ್ಯಕ್ಷತೆಯನ್ನು ವಿಜೇತ ವಿಶೇಷ ಶಾಲಾ ಗೌರವಾಧ್ಯಕ್ಷರು ಉದಯ ಕೃಷ್ಣಯ್ಯ ಶೆಟ್ಟಿ ಚಾರಿಟೇಬಲ್ ಟ್ರಸ್ಟ್ ರಿ. ಅಧ್ಯಕ್ಷರು ಉದಯ್ ಕುಮಾರ್ ಶೆಟ್ಟಿ ಮುನಿಯಾಲು ಇವರು ವಹಿಸಿದ್ದು, ದಾನಿಗಳನ್ನು ಅಭಿನಂದಿಸಿದರು.
ಕರಾವಳಿ ಅಭಿವೃದ್ಧಿ ಪ್ರಾಧಿಕಾರ, ಮಂಗಳೂರು ನ ಅಧ್ಯಕ್ಷರಾದ ಎಂ.ಎ. ಗಫೂರ್ ಇವರು ದಶಕ ವಿಜಯೋತ್ಸವ ಸ್ಮರಣ ಸಂಚಿಕೆಯನ್ನ ಬಿಡುಗಡೆಗೊಳಿಸಿ ಶುಭಹಾರೈಸಿದರು.
ಮುಖ್ಯ ಅತಿಥಿಗಳಾಗಿ ಶ್ರೀ ಕೇಶವ್. ಪಿ ಎಂ.ಆರ್.ಪಿ.ಎಲ್ ಸಿ.ಎಸ್.ಆರ್ ಮ್ಯಾನೇಜರ್ , ಶ್ರೀ ಕಮಲಾಕ್ಷ ಕಾಮತ್ ನಿವೃತ್ತ ಸಿ.ಎ, ಶ್ರೀ ಹರಿಪ್ರಸಾದ್ ರೈ HPR ಸಮೂಹ ಸಂಸ್ಥೆ ಮಣಿಪಾಲದ ಚೇರ್ಮನ್ , ಕೆ. ರಾಧಾಕೃಷ್ಣ ಶೆಟ್ಟಿ ಶ್ರೀ ದುರ್ಗಾ ವಿದ್ಯಾ ಸಂಘ ಟ್ರಸ್ಟ್ (ರಿ.) ನ ಅಧ್ಯಕ್ಷರು , ಗುರುಪ್ರಸಾದ್ ಶೆಟ್ಟಿ ಉದ್ಯಮಿಗಳು, ಜಾರ್ಕಳ Ln, ದನಂಜಯ ಆಳ್ವ ಆಳ್ವ ಕನ್ಸ್ಟ್ರಕ್ಷನ್ ಮಾಂಟ್ರಾಡಿ, ರತ್ನಾಕರ್ ಅಮೀನ್ ಶಾಲಾ ಅಧ್ಯಕ್ಷರು, ಸಂಸ್ಥಾಪಕಿ ಡಾ ಕಾಂತಿ ಹರೀಶ್ ಉಪಸ್ಥಿತರಿದ್ದರು.
ವಿಶೇಷ ಆಕರ್ಷಣೆಯಾಗಿ ಬಿಗ್ ಬಾಸ್ ಸೀಸನ್ ಖ್ಯಾತಿಯ ಉಪಾಂತ ವಿಜಯಿ ಕು. ರಕ್ಷಿತಾ ಶೆಟ್ಟಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಕಾರ್ಯಕ್ರಮಕ್ಕೆ ವಿಶೇಷ ಮೆರುಗನ್ನು ನೀಡಿದರು.
ದಶಕ ವಿಜಯೋತ್ಸವ ಸಂದರ್ಭದಲ್ಲಿ ಕಾರ್ಕಳದ ಪ್ರಖ್ಯಾತ ವ್ಯಕ್ತಿಗಳಾದ ಸುಬೀತ್ ಕುಮಾರ್ ಮಾಜಿ ಅಧ್ಯಕ್ಷರು ಪುರಸಭೆ ಕಾರ್ಕಳ ಹಾಗೂ ನಾಗೇಶ್ ಹಿರಿಯ ಮುಖ್ಯಶಿಕ್ಷಕರು ನಲ್ಲೂರು ಇವರ ಸೇವೆಯನ್ನು ಗುರುತಿಸಿ ಗೌರವಿಸಲಾಯಿತು.

ಈ ಸಂದರ್ಭದಲ್ಲಿ ಸ್ವಯಂ ಸೇವಾ ಸಂಸ್ಥೆಗಳ ಮೂಲಕ ವಿಶೇಷ ಚೇತನರಿಗಾಗಿ ಸೇವೆ ಸಲ್ಲಿಸುತಿರುವ ಡಾ. ವಸಂತ್ ಕುಮಾರ್ ಶೆಟ್ಟಿ ಆಡಳಿತ ನಿರ್ದೇಶಕರು ಸಾನಿಧ್ಯ ಸಮೂಹ ಸಂಸ್ಥೆ, ಶ್ರೀ ಹೆಚ್.ಆರ್ ಶಿವಕುಮಾರ್, ಅಧ್ಯಕ್ಷರು ರೇಣುಕಾ ಎಲ್ಲಮ್ಮ ಕಿವುಡ ಮತ್ತು ಮೂಕ ಮಕ್ಕಳ ವಸತಿ ಶಾಲೆ ರಾಣೆಬೆನ್ನೂರು, ಶ್ರೀಮತಿ ಆಗ್ನೆಸ್ ಕುಂದರ್ ಸ್ಥಾಪಕರು ಕಾರುಣ್ಯ ವಿಶೇಷ ಶಾಲೆ ಪಡುಕೆರೆ, ಶ್ರೀಮತಿ ಜೆಸಿಂತಾ ಡಿ’ಮೆಲ್ಲೊ ಮ್ಯಾನೇಜಿಂಗ್ ಟ್ರಸ್ಟಿ ಜೀವನ್ ವೆಲ್ವೇರ್ ಟ್ರಸ್ಟ್ (ರಿ.) ಅರುಣೋದಯ ವಿಶೇಷ ಶಾಲೆ, ಕಾರ್ಕಳ ಶ್ರೀ ಹೆಚ್ ರವೀಂದ್ರ ಮುಖ್ಯ ಶಿಕ್ಷಕರು ವಾಗ್ವತಿ ವಿಶೇಷ ಶಾಲೆ ಕುಂದಾಪುರ, ಶ್ರೀಮತಿ ಶಶಿಕಲಾ ಕೋಟ್ಯಾನ್ ಮಾಜಿ ಮುಖ್ಯ ಶಿಕ್ಷಕರು ‘ಆಶಾ ನಿಲಯ’ ವಿಶೇಷ ಶಾಲೆ ಉಡುಪಿ, ಜನಾರ್ಧನ್ ಎನ್. ಸ್ಥಾಪಕರು ಚೈತನ್ಯ ಚಾರಿಟೇಬಲ್ ಟ್ರಸ್ಟ್ (ರಿ.), ಸಿಸ್ಟರ್ ಎನ್ನಿ ಗೋನ್ಸಾಲ್ವಿಸ್ ಮುಖ್ಯ ಶಿಕ್ಷಕರು ಮಾನಸ ವಿಶೇಷ ಶಾಲೆ ಪಾಂಬೂರು, ಕೆ. ಎಸ್. ಜೈ ವಿಠಲ ಅರ್ಚನಾ ಟ್ರಸ್ಟ್ (ರಿ.) ಮಣಿಪಾಲ, ಶ್ರೀಮತಿ ಬಿ. ಲೀಲಾವತಿ ಕರ್ಕಡ ಮುಖ್ಯ ಶಿಕ್ಷಕರು ಚೈತನ್ಯ ವಿಶೇಷ ಶಾಲೆ ಕುಂದಾಪುರ ಗೌರವಿಸಲಾಯಿತು.
ಸಭಾಂಗಣವನ್ನು 500 ಚದರ ಅಡಿ ವಿಸ್ತರಿಸಿ ನಿರ್ಮಿಸಿ ದೇಣಿಗೆಯಾಗಿ ಕೊಟ್ಟ ಶ್ರೀ ದನಂಜಯ ಆಳ್ವ ಆಳ್ವ ಕನ್ಸ್ಟ್ರಕ್ಷನ್ ಮಾಂಟ್ರಾಡಿ ಇವರನ್ನು, ವಿಜೇತ ವಿಶೇಷ ಶಾಲೆಯಲ್ಲಿ 4 ವರ್ಷ ಸೇವೆ ಸಲ್ಲಿಸಿದ ಸಂಸ್ಥೆಯ ಸಿಬ್ಬಂದಿ ಕು.ಸವಿತಾ ಇವರನ್ನು,ಸಾಲ ಪಾವತಿಗಾಗಿ ದೇಣಿಗೆ ನೀಡಿ ಸಹಕರಿಸಿದ ಧಾಣಿಗಳನ್ನು, ಎಂ.ಪಿ.ಎಂ ಕಾಲೇಜಿನ ಸ್ವಯಂ ಸೇವಕ ವಿದ್ಯಾರ್ಥಿಗಳನ್ನು ಹಾಗೂ ಸ್ವಯಂ ಸೇವಕರಾಗಿ ಸೇವೆ ಸಲ್ಲಿಸಿದ ಸಂಘ ಸಂಸ್ಥೆಗಳನ್ನು ಅಭಿನಂದಿಸಲಾಯಿತು.

ಶ್ರೀ ಗಣೇಶ್ ಜಾಲ್ಸುರು ನಿರೂಪಿಸಿದ ಕಾರ್ಯಕ್ರಮದಲ್ಲಿ ಸಂಸ್ಥಾಪಕಿ ಡಾ. ಕಾಂತಿ ಹರೀಶ್ ಸ್ವಾಗತದೊಂದಿಗೆ ಪ್ರಾಸ್ತಾವಿಕ ಮಾತುಗಳನ್ನಾಡಿ, ಮ್ಯಾನೇಜಿಂಗ್ ಟ್ರಸ್ಟಿ ಹರೀಶ್ ವಂದಿಸಿದರು.
ಶಾಲಾ ಮಕ್ಕಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ, ಸಿಬಂದಿ ಹಾಗೂ ಮಕ್ಕಳಿಂದ ಸುಕೇಶ್ ಶೆಟ್ಟಿ ನಿರ್ದೇಶನದ ‘ಸತ್ಯನಾಪುರದ ಸಿರಿ’ ನೃತ್ಯ ರೂಪಕ, ಸುಬ್ರಹ್ಮಣ್ಯ ಪ್ರಸಾದ್ ಮುದ್ರಾಡಿ ಇವರ ನಿರ್ದೇಶನದಲ್ಲಿ ಶ್ರೀ ದುರ್ಗಾ ಯಕ್ಷಗಾನ ಕೇಂದ್ರದ ವಿದ್ಯಾರ್ಥಿಗಳಿಂದ ವೀರಮಣಿ ಕಾಳಗ ಯಕ್ಷಗಾನ ಪ್ರಸಂಗ, ಪ್ರಶಾಂತ್ ಶೆಟ್ಟಿ ಪರಪಾಡಿ ನೇತೃತ್ವದ ಡೆನ್ನಾನ ಕಲಾವಿದರು ಕಾರ್ಕಳ ತಂಡದ ವತಿಯಿಂದ ಡೆನ್ನಾನ ನಾಟಕ ಕಾರ್ಯಕ್ರಮ ನೆರವೇರಿತು.
ವಿದ್ಯಾರ್ಥಿಗಳು,ಪೋಷಕರು, ದಾನಿಗಳು,ಪ್ರೇಕ್ಷಕರು ಸುಮಾರು 800 ಕಿಂತಲೂ ಹೆಂಚಿನ ಜನರು ಕಾರ್ಯಕ್ರಮದಲ್ಲಿ ಭಾಗವಹಿಸಿದರು.









