
ವಾಣಿಜ್ಯ ಬಳಕೆಯ 19 ಕೆಜಿ LPG ಗ್ಯಾಸ್ ಸಿಲಿಂಡರ್ ನ ಬೆಲೆಯನ್ನು 6 ರೂ. ಗಳಷ್ಟು ಹೆಚ್ಚಿಸಲಾಗಿದೆ.
1797 ರೂಪಾಯಿ ಇದ್ದ ಸಿಲಿಂಡರ್ ನ ಬೆಲೆ ಇದೀಗ 1803 ರೂಪಾಯಿಯಾಗಿದೆ. ವಾಣಿಜ್ಯ ಎಲ್ ಪಿಜಿ ಸಿಲಿಂಡರ್ಗಳ ಬೆಲೆಯಲ್ಲಿ ಹೆಚ್ಚಳವಾಗಿದ್ದರೂ ದೇಶಿಯ ಎಲ್.ಪಿ.ಜಿ ಸಿಲಿಂಡರ್ ಗಳ ಬೆಲೆಯಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ವಾಣಿಜ್ಯ ಬಳಕೆಯ ಎಲ್.ಪಿ.ಜಿ ಸಿಲಿಂಡರ್ ಗಳ ದರ ಏರಿಕೆ ರೆಸ್ಟೋರೆಂಟ್ ಗಳಲ್ಲಿನ ಊಟದ ಮೇಲಿನ ದರದ ಮೇಲು ಪರಿಣಾಮ ಬೀರಬಹುದಾಗಿದೆ.
ದೆಹಲಿಯಲ್ಲಿ 19 ಕೆಜಿ ಸಿಲಿಂಡರ್ ನ ಬೆಲೆ 1803 ರೂ.ಯಾಗಿದ್ದು, ಕೊಲ್ಕತ್ತಾದಲ್ಲಿ ಹೊಸ ಬೆಲೆ ರೂ.1913ರೂ. ಯಾಗಿದೆ. ಮುಂಬೈನಲ್ಲಿ ವಾಣಿಜ್ಯ ಬಳಕೆಯ ಸಿಲಿಂಡರ್ ನ ಬೆಲೆ 1755.50 ರೂಪಾಯಿ ಏರಿಕೆಯಾಗಿದೆ.






















































