24.2 C
Udupi
Sunday, February 15, 2026
spot_img
spot_img
HomeBlogವರ್ಧಮಾನ ಪೂರ್ವ ಪ್ರಾಥಮಿಕ ಶಾಲೆಯಲ್ಲಿ "ಜ್ಞಾನಜ್ಯೋತಿ" ಸಂಭ್ರಮಾಚರಣೆ

ವರ್ಧಮಾನ ಪೂರ್ವ ಪ್ರಾಥಮಿಕ ಶಾಲೆಯಲ್ಲಿ “ಜ್ಞಾನಜ್ಯೋತಿ” ಸಂಭ್ರಮಾಚರಣೆ

spot_imgspot_img

ವರ್ಧಮಾನ ಶಿಕ್ಷಣ ಸಂಸ್ಥೆಯಲ್ಲಿ ಪೂರ್ವ ಪ್ರಾಥಮಿಕ ಶಾಲೆಯಿಂದ ಪ್ರಾಥಮಿಕ ಶಾಲೆಯತ್ತ ಹೆಜ್ಜೆಯನ್ನಿಡುತ್ತಿರುವ ಯುಕೆಜಿ ಪುಟಾಣಿಗಳು ಜ್ಞಾನ ಜ್ಯೋತಿಯನ್ನು ಬೆಳಗಿ ಎಲ್ಕೆಜಿ ಮಕ್ಕಳಿಗೆ ನೀಡಿದರು.
ಕಾರ್ಯಕ್ರಮವನ್ನು ವರಂಗ ಮಠ ಬಸದಿಯ ವ್ಯವಸ್ಥಾಪಕರಾದ ಯುವರಾಜ್ ಆರಿಗ ಹಾಗೂ ವಿನಯ ಆರಿಗ ದಂಪತಿಗಳು ಜ್ಯೋತಿ ಬೆಳಗಿಸುವುದರ ಮುಖಾಂತರ ಕಾರ್ಯಕ್ರಮಕ್ಕೆ ಚಾಲನೆಯನ್ನು ನೀಡಿದರು.

   ವರ್ಧಮಾನ ಶಿಕ್ಷಣ ಸಂಸ್ಥೆ ಮುಗ್ಧ ಮಕ್ಕಳಿಂದಲೇ ಶಿಕ್ಷಣದ ಜೊತೆ ಜೊತೆಗೆ ನಮ್ಮ ಸಂಸ್ಕೃತಿ, ಸಂಸ್ಕಾರದ ಅರಿವನ್ನು ಮೂಡಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದು ಅಭಿನಂದನಾರ್ಹ. 

ಜ್ಞಾನದ ಜ್ಯೋತಿ ಸದಾ ಬೆಳಗುತ್ತಿರಲಿ ಎಂದು ಮುಖ್ಯ ಅತಿಥಿಯಾಗಿ ಆಗಮಿಸಿದ ವಿನಯ ಆರಿಗ ರವರು ಶುಭಹಾರೈಸಿದರು.
ಸಂಸ್ಥೆಯ ಅಧ್ಯಕ್ಷರಾದ ಶಶಿಕಲಾ.ಕೆ. ಹೆಗ್ಡೆ ಪ್ರಸ್ತಾವಿಕ ನುಡಿಗಳೊಂದಿಗೆ ಅತಿಥಿ ಗಣ್ಯರನ್ನು ಸ್ವಾಗತಿಸಿದರು. ಸಂಸ್ಥೆಯ ಸಂಚಾಲಕರಾದ ಕುಮಾರಯ್ಯ ಹೆಗ್ಡೆಯವರು ಗೌರವಿಸಿದರು. ಕರ್ತವ್ಯ ಜೈನ್ ವಂದನಾರ್ಪಣೆ ಗೈದರು. ಶಿಕ್ಷಕ ವೃಂದದವರು ಉಪಸ್ಥಿತರಿದ್ದರು.

spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page