
ಅಲಯನ್ಸ್ 275 S ವ್ಯಾಪ್ತಿಯ ನೂತನವಾಗಿ ಆರಂಭಗೊಂಡಿರುವ ಲೇಡಿ ಅಲಯನ್ಸ್ ಕ್ಲಬ್ ಹೆಬ್ರಿ ಇದರ ನೂತನ ಅಧ್ಯಕ್ಷರಾಗಿ ಸುನೀತಾ ಹೆಬ್ಬಾರ್ ಆಯ್ಕೆಯಾಗಿದ್ದಾರೆ.
ಲೇಡಿ ಅಲಯನ್ಸ್ ಕ್ಲಬ್ ಹೆಬ್ರಿ ಇದರ ಕಾರ್ಯದರ್ಶಿಯಾಗಿ ರಮ್ಯಕಾಂತಿ ಹಾಗೂ ಕೋಶಾಧಿಕಾರಿಯಾಗಿ ಅಮೃತ ಆಯ್ಕೆಯಾಗಿರುತ್ತಾರೆ.
ಅಲಯನ್ಸ್ ಜಿಲ್ಲೆ 275S ರ ಪ್ರಥಮ ಉಪಜಿಲ್ಲಾ ಗವರ್ನರ್ ಅಲೈ ಸುನಿಲ್ ಕುಮಾರ್ ಶೆಟ್ಟಿ ಮತ್ತು ದ್ವಿತೀಯ ಉಪ ಜಿಲ್ಲಾ ಗವರ್ನರ್ ಅಲೈ ಸುಧಾಕರ್ ಹೆಗ್ಡೆ ಹಾಗೂ ಜಿಲ್ಲಾ ಸಂಪುಟ ಕಾರ್ಯದರ್ಶಿ ಜಗದೀಶ್ ಹೊಳ್ಳ ಇವರ ಮಾರ್ಗದರ್ಶನದಲ್ಲಿ ಲೇಡಿ ಅಲಯನ್ಸ್ ಕ್ಲಬ್ ಹೆಬ್ರಿ ಆರಂಭಗೊಂಡಿರುತ್ತದೆ . ಸಭೆಯಲ್ಲಿ ನೂತನ ಅಧ್ಯಕ್ಷೆ ಸುನೀತಾ ಹೆಬ್ಬಾರ್ ಸ್ವಾಗತಿಸಿದರು ಕಾರ್ಯದರ್ಶಿ ರಮ್ಯಕಾಂತಿ ವಂದಿಸಿದರು . ಸಭೆಯಲ್ಲಿ ಅಲಯನ್ಸ್ ಕ್ಲಬ್ ಹೆಬ್ರಿ ಇದರ ಅಧ್ಯಕ್ಷರಾದ ಕೆ . ರಾಮಚಂದ್ರ ಭಟ್ ಮತ್ತು ಕಾರ್ಯದರ್ಶಿ ಬಾಲಚಂದ್ರ ಮುದ್ರಾಡಿ ಇವರು ಉಪಸ್ಥಿತರಿದ್ದು ನೂತನ ಅಧ್ಯಕ್ಷ ಹಾಗು ಕಾರ್ಯದರ್ಶಿಗೆ ಶುಭ ಹಾರೈಸಿದರು.






















































