ಮುಖ್ಯ ಶಿಕ್ಷಕರಾದ ಜಗದೀಶ್ ಹೆಗ್ಡೆ ಸಮ್ಮುಖದಲ್ಲಿ ಸನ್ಮಾನ

ರೋಟರಿ ಕ್ಲಬ್ ಕಾರ್ಕಳ ,ರಾಕ್ ಸಿಟಿ ಇವರ 2024-25 ನೇ ಸಾಲಿನ ಪದಗ್ರಹಣ ಸಮಾರಂಭದಲ್ಲಿ ಶ್ರೀ ದುರ್ಗಾ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ, ಕುಕ್ಕುಂದೂರು ಇಲ್ಲಿನ ಶಿಕ್ಷಕರಾದ ಶ್ರೀ ಉಮೇಶ್ ಇವರನ್ನು ಅವರ ನಿಸ್ವಾರ್ಥ ಸೇವೆಗಾಗಿ ರೋಟರಿ ಕ್ಲಬ್ ವತಿಯಿಂದ ದಿನಾಂಕ ಜುಲೈ.2 ರಂದು ಸನ್ಮಾನಿಸಲಾಯಿತು.
ಅದೇ ರೀತಿ ದಿನಾಂಕ ಜುಲೈ 3ರಂದು ಅವರ ಸೌಜನ್ಯಶೀಲಸೇವೆಯನ್ನು ಗುರುತಿಸಿ ಮಾತ್ರ ಸಂಸ್ಥೆಯ ಮುಖ್ಯ ಶಿಕ್ಷಕರಾದ ಜಗದೀಶ್ ಹೆಗ್ಡೆಯವರು ಸಮ್ಮುಖದಲ್ಲಿ ಎಲ್ಲಾ ಸಹ ಶಿಕ್ಷಕರ ಉಪಸ್ಥಿತಿಯಲ್ಲಿ ಉಮೇಶ್ ರವರನ್ನು ಸಂಸ್ಥೆಯ ವತಿಯಿಂದ ಸನ್ಮಾನಿಸಲಾಯಿತು. ಅದೇ ಸಂದರ್ಭದಲ್ಲಿ ನಮ್ಮ ಶಾಲಾ ಹಿರಿಯ ಶಿಕ್ಷಕಿಯಾದ ಶ್ರೀಮತಿ ಅನಿತಾ ರವರಿಗೆ ರೋಟರಿ ವತಿಯಿಂದ ಹೊಲಿಗೆ ಮಿಷನ್ ವಿತರಿಸಲಾಯಿತು.
