29.1 C
Udupi
Monday, December 29, 2025
spot_img
spot_img
HomeBlogರೋಟರಿ ಕ್ಲಬ್ ಕಾರ್ಕಳ,ರಾಕ್ ಸಿಟಿಯವರಿಂದ, ಮದ್ಯ ವಸನದ ವಿರುದ್ಧ ಜನ ಜಾಗೃತಿ ಕಾರ್ಯಕ್ರಮ

ರೋಟರಿ ಕ್ಲಬ್ ಕಾರ್ಕಳ,ರಾಕ್ ಸಿಟಿಯವರಿಂದ, ಮದ್ಯ ವಸನದ ವಿರುದ್ಧ ಜನ ಜಾಗೃತಿ ಕಾರ್ಯಕ್ರಮ

ಡಾll ಎ ವಿ ಬಾಳಿಗ ಸ್ಮಾರಕ ಆಸ್ಪತ್ರೆ ಉಡುಪಿ ಇವರ 20ನೇ ವರ್ಷದ 35ನೇ ‘ಮದ್ಯ ವ್ಯಸನ ವಿಮುಕ್ತಿ ಶಿಬಿರ‘ ಹಾಗೂ ಮದ್ಯ ವ್ಯಸನದ ವಿರುದ್ಧ ಜನಜಾಗೃತಿ ಮೂಡಿಸುವ ಪ್ರಯುಕ್ತ ಬೀದಿ ನಾಟಕವು ರೋಟರಿ ಕ್ಲಬ್ ಕಾರ್ಕಳ ರಾಕ್ ಸಿಟಿ ಸಂಸ್ಥೆಯ ಸಹಕಾರದೊಂದಿಗೆ ಆಸ್ಪತ್ರೆಯ ವೈದ್ಯರಾದ ಡಾll ವಿರೂಪಾಕ್ಷ ದೇವರಮನೆ ಇವರ ಮಾರ್ಗದರ್ಶನದೊಂದಿಗೆ ಕಾರ್ಕಳದ ಬಸ್ಟ್ಯಾಂಡ್ ವಠಾರದಲ್ಲಿ ನಡೆಯಿತು.


ಸಂಸ್ಥೆಯ ಅಧ್ಯಕ್ಷರಾದ ಸುರೇಂದ್ರ ನಾಯಕ್, ಮಾರ್ಗದರ್ಶಕರಾದ ಡಾll ಭರತೇಶ್ ಆದಿರಾಜ್, ವಲಯ ಸೇನಾನಿ ರೋl ಪ್ರಶಾಂತ್ ಬಿಳಿರಾಯ, ರೋl ವೃಂದಾ ಹರಿಪ್ರಕಾಶ್ ಶೆಟ್ಟಿ, ರೋl ಹರಿಪ್ರಕಾಶ್ ಶೆಟ್ಟಿ, ರೋl ಶ್ರೀವರ್ಮ ಅಜ್ರಿ, ರೋl ಇಕ್ಬಾಲ್ ಅಹ್ಮದ್, ರೋl ಅಬ್ದುಲ್ ರೆಹಮಾನ್, ರೋl ಉಪೇಂದ್ರ ವಾಗ್ಲೆ, ಶ್ರೀಮತಿ ಲಕ್ಷ್ಮೀ ಹೆಗಡೆ, ಶೃತಿ, ಸಹನಾ, ಅದಿತಿ ಮತ್ತು ಅನೇಕ ಪ್ರೇಕ್ಷಕರು ಬೀದಿ ನಾಟಕವನ್ನು ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದರು. ಕುಡಿತ ಹಾಗೂ ಇನ್ನಿತರ ದುಶ್ಚಟಗಳಿಗೆ ಬಳಲುತ್ತಿರುವ ರೋಗಿಗಳಿಗೆ ವೈದ್ಯರಾದ ವಿರೂಪಾಕ್ಷ ದೇವರಮನೆಯವರು ದಿನಾಂಕ 2026 ಜನವರಿ ತಿಂಗಳ 1 ರಿಂದ 10 ರವಗೆ ಉಡುಪಿ ಡಾll ಎ ವಿ ಬಾಳಿಗಾ ಆಸ್ಪತ್ರೆಯಲ್ಲಿ ನಡೆಯುವ ಉಚಿತ ಶಿಬಿರದಲ್ಲಿ ಸೇರಿಕೊಂಡು ತಮ್ಮ ಅಮೂಲ್ಯವಾದ ಜೀವನವನ್ನು ಸುಂದರವಾಗಿ ರೂಪಿಸುವಂತೆ ಕರೆಯಿತ್ತರು.

spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page