
ಕಾರ್ಕಳ, ಜುಲೈ 17: ಯುವಕರು ರೋಟರಾಕ್ಟ್ ನಂತಹ ಸಂಘ- ಸಂಸ್ಥೆಗಳಿಗೆ ಸೇರುವುದರ ಮೂಲಕ ತಮ್ಮ ವೈಯಕ್ತಿಕ ಅಭಿವೃದ್ಧಿಯ ಜೊತೆಗೆ ಸಮಾಜ ಸೇವೆ ಮಾಡುವ ಮನೋಗುಣವನ್ನು ಬೆಳೆಸಿಕೊಳ್ಳಬೇಕು ಎಂದು ರೋಟರಿ ಕ್ಲಬ್ ಕಾರ್ಕಳದ 2025- 26ನೇ ಸಾಲಿನ ಅಧ್ಯಕ್ಷರಾದ Rtn. ನವೀನ್ ಚಂದ್ರ ಶೆಟ್ಟಿ ಇವರು ಹೇಳಿದರು.
ಅವರು ಕಾರ್ಕಳದ ರೋಟರಿ ಬಾಲ ಭವನದಲ್ಲಿ ನಡೆದ ರೋಟರಾಕ್ಟ್ ಕ್ಲಬ್ ಕಾರ್ಕಳ ಇದರ 2025-26 ನೇ ಸಾಲಿನ ಪದಗ್ರಹಣ ಕಾರ್ಯಕ್ರಮವನ್ನು ನೆರವೇರಿಸಿ ಮಾತನಾಡುತ್ತಿದ್ದರು. ರೋಟರಾಕ್ಟ್ ಕ್ಲಬ್ ಕಾರ್ಕಳದ ನೂತನ ಅಧ್ಯಕ್ಷರಾಗಿ Rtr. ಸಂದೇಶ್ ಹಾಗೂ ಕಾರ್ಯದರ್ಶಿಯಾಗಿ Rtr. ಅನ್ವಯ್ ಇವರು ಅಧಿಕಾರವನ್ನು ಸ್ವೀಕರಿಸಿದರು. ಈ ಸಂದರ್ಭದಲ್ಲಿ ರೋಟರಿ ಜಿಲ್ಲೆ 3182ರ ವಲಯ 5ರ ಅಸಿಸ್ಟೆಂಟ್ ಗವರ್ನರ್ Rtn. ವಿಘ್ನೇಶ್ ಶೆಣೈ, ವಲಯ ಸೇನಾನಿ Rtn. MPHF ಜಾನ್ ಆರ್ ಡಿ ಸಿಲ್ವ, ಜಿಲ್ಲಾ ರೋಟರಾಕ್ಟ್ ಸಭಾಪತಿಗಳಾದ Rt. MPHF ನವೀನ್ ಅಮೀನ್, ಜಿಲ್ಲಾ ಪ್ರತಿನಿಧಿ Rtr. ನಿವಾಸ್, ಮಾಜಿ ಜಿಲ್ಲಾ ಪ್ರತಿನಿಧಿ Rtn. ಚೇತನ್ ಕುಮಾರ್, ರೋಟರಾಕ್ಟ್ ಕ್ಲಬ್ ಕಾರ್ಕಳದ ಸಭಾಪತಿಗಳಾದ Rtn. ನಿರಂಜನ್ ಜೈನ್ ಮತ್ತು Rtn. ಪ್ರಭಾ ನಿರಂಜನ್ ಜೈನ್ ಇವರು ಉಪಸ್ಥಿತರಿದ್ದರು. ನಿರ್ಗಮನ ಕಾರ್ಯದರ್ಶಿ Rtr. ವಿನೀತ್ ರಾವ್ ಇವರು 2024-25 ನೇ ಸಾಲಿನ ಕಾರ್ಯಕ್ರಮದ ವರದಿಯನ್ನು ವಾಚಿಸಿದರು ಮತ್ತು ನಿರ್ಗಮನ ಅಧ್ಯಕ್ಷ Rtr. ಸುನಿಲ್ ನಾಯಕ್ ಇವರು ತಮ್ಮ ಅನುಭವವನ್ನು ಹಂಚಿಕೊಂಡರು.
ನೂತನವಾಗಿ ಅಧಿಕಾರವನ್ನು ಸ್ವೀಕರಿಸಿದ Rtr. ಸಂದೇಶ್ ಇವರು ತಮ್ಮ ತಂಡದ ಪರಿಚಯವನ್ನು ಮಾಡಿಕೊಟ್ಟರು ಹಾಗೂ ತಂಡಕ್ಕೆ ಹೊಸದಾಗಿ 11 ಜನ ಸದಸ್ಯರನ್ನು ಸೇರ್ಪಡೆಗೊಳಿಸಲಾಯಿತು. ಈ ಸಂದರ್ಭದಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಅತ್ಯುತ್ತಮ ಅಂಕ ಗಳಿಸಿದ ಇಬ್ಬರು ವಿದ್ಯಾರ್ಥಿನಿಯರಿಗೆ ವಿದ್ಯಾರ್ಥಿವೇತನ ವಿತರಣೆ, ಶಾಲಾ ಮಕ್ಕಳಿಗೆ ಸ್ಕೂಲ್ ಬ್ಯಾಗ್ ವಿತರಣೆ, ಆಟೋ ಚಾಲಕರಿಗೆ ಸಮವಸ್ತ್ರ ವಿತರಣೆ, ಡೆಂಗ್ಯೂ ಜಾಗೃತಿಯ ಕುರಿತು ಕರಪತ್ರ ಬಿಡುಗಡೆಯಂತಹ ಹಲವಾರು ಸಮಾಜಖಿ ಕಾರ್ಯಕ್ರಮಗಳನ್ನ ಮತ್ತು ಕ್ಲಬ್ ನ ಕಾರ್ಯಸೂಚಿಯನ್ನು ಒಳಗೊಂಡ ಬುಲೆಟಿನ್ ಅನ್ನು ಬಿಡುಗಡೆಗೊಳಿಸಲಾಯಿತು.



















































