24 C
Udupi
Monday, February 2, 2026
spot_img
spot_img
HomeBlogರೈಲ್ವೆ ನೇಮಕಾತಿ ಮಂಡಳಿಯಲ್ಲಿ ಹಲವು ಹುದ್ದೆಗಳಿಗೆ ಅರ್ಜಿ ಆಹ್ವಾನ

ರೈಲ್ವೆ ನೇಮಕಾತಿ ಮಂಡಳಿಯಲ್ಲಿ ಹಲವು ಹುದ್ದೆಗಳಿಗೆ ಅರ್ಜಿ ಆಹ್ವಾನ

ರೈಲ್ವೆ ನೇಮಕಾತಿ ಮಂಡಳಿಯಲ್ಲಿ 2,570 ಜೂನಿಯರ್ ಎಂಜಿನಿಯರ್ (JE), ಡಿಪೋ ಮೆಟೀರಿಯಲ್ ಸೂಪರಿಂಟೆಂಡೆಂಟ್ (DMS), ಮತ್ತು ಕೆಮಿಕಲ್ ಮತ್ತು ಮೆಟಲರ್ಜಿಕಲ್ ಅಸಿಸ್ಟೆಂಟ್ (CMA) ಹುದ್ದೆಗಳ ನೇಮಕಾತಿಗಾಗಿ ಕಿರು ಅಧಿಸೂಚನೆಯನ್ನು ಬಿಡುಗಡೆ ಮಾಡಿದ್ದು ಈ ನೇಮಕಾತಿ ಪ್ರಕ್ರಿಯೆಯು ಅಧಿಕೃತ ಅಧಿಸೂಚನೆಯ ಪ್ರಕಾರ, ಅರ್ಜಿ ಪ್ರಕ್ರಿಯೆಯು ಅಕ್ಟೋಬರ್ 31 ರಂದು ಪ್ರಾರಂಭವಾಗಲಿದೆ.

ಅಭ್ಯರ್ಥಿಗಳು ಅಧಿಕೃತ RRB ವೆಬ್‌ಸೈಟ್ rrbapply.gov.in ಗೆ ಭೇಟಿ ನೀಡುವ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.

  • ಶೈಕ್ಷಣಿಕ ಅರ್ಹತೆ:
    ಜೂನಿಯರ್ ಎಂಜಿನಿಯರ್ ಮತ್ತು ಡಿಪೋ ಮೆಟೀರಿಯಲ್ ಸೂಪರಿಂಟೆಂಡೆಂಟ್ ಹುದ್ದೆಗಳಿಗೆ ಅಭ್ಯರ್ಥಿಗಳು ಎಂಜಿನಿಯರಿಂಗ್, ಕಂಪ್ಯೂಟರ್ ಸೈನ್ಸ್, ಐಟಿ ಅಥವಾ ಸಂಬಂಧಿತ ಕ್ಷೇತ್ರದಲ್ಲಿ ಡಿಪ್ಲೊಮಾ ಅಥವಾ ಬಿಇ/ಬಿಟೆಕ್ ಪದವಿ ಹೊಂದಿರಬೇಕು. ಸಿಎಂಎ ಹುದ್ದೆಗಳಿಗೆ ಭೌತಶಾಸ್ತ್ರ ಮತ್ತು ರಸಾಯನಶಾಸ್ತ್ರದಲ್ಲಿ ಪದವಿ ಪಡೆದಿರಬೇಕು.
  • ವಯಸ್ಸಿನ ಮಿತಿ:
    ಈ ನೇಮಕಾತಿಗೆ ಅರ್ಜಿ ಸಲ್ಲಿಸಲು, ಅಭ್ಯರ್ಥಿಗಳು ಜನವರಿ 1, 2026 ಕ್ಕೆ 18 ರಿಂದ 33 ವರ್ಷ ವಯಸ್ಸಿನವರಾಗಿರಬೇಕು. ಮೀಸಲಾತಿ ವರ್ಗಗಳಿಗೆ ಸರ್ಕಾರಿ ನಿಯಮಗಳ ಪ್ರಕಾರ ವಯೋಮಿತಿ ಸಡಿಲಿಕೆ ನೀಡಲಾಗುತ್ತದೆ.
  • ಹುದ್ದೆ ಮತ್ತು ವೇತನ ಶ್ರೇಣಿಗಳು:
    ಒಟ್ಟು 2,570 ಹುದ್ದೆಗಳು ಜೆಇ, ಡಿಎಂಎಸ್ ಮತ್ತು ಸಿಎಂಎ ಹುದ್ದೆಗಳನ್ನು ಒಳಗೊಂಡಿದ್ದು ಆಯ್ಕೆಯಾದ ಅಭ್ಯರ್ಥಿಗಳು 7 ನೇ ವೇತನ ಆಯೋಗದ ಪ್ರಕಾರ ಹಂತ 6 ರಲ್ಲಿ 35,400ರೂ. ಮಾಸಿಕ ವೇತನವನ್ನು ಇತರ ರೈಲ್ವೆ ಭತ್ಯೆಗಳು ಮತ್ತು ಸವಲತ್ತುಗಳೊಂದಿಗೆ ಪಡೆಯುತ್ತಾರೆ.
  • ಆಯ್ಕೆ ಪ್ರಕ್ರಿಯೆ:
    ನೇಮಕಾತಿ ಪ್ರಕ್ರಿಯೆಯು ನಾಲ್ಕು ಹಂತಗಳಲ್ಲಿ ಪೂರ್ಣಗೊಳ್ಳುತ್ತದೆ. CBT-I, CBT-II, ದಾಖಲೆ ಪರಿಶೀಲನೆ ಮತ್ತು ವೈದ್ಯಕೀಯ ಪರೀಕ್ಷೆ. CBT-I ನಲ್ಲಿ ಅರ್ಹತೆ ಪಡೆದ ಅಭ್ಯರ್ಥಿಗಳನ್ನು CBT-II ಗೆ ಕರೆಯಲಾಗುತ್ತದೆ. ವೈದ್ಯಕೀಯ ಫಿಟ್‌ನೆಸ್ ಮತ್ತು ದಾಖಲೆ ಪರಿಶೀಲನೆಯ ನಂತರ ಅಂತಿಮ ಆಯ್ಕೆಯನ್ನು ಮಾಡಲಾಗುತ್ತದೆ.
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page