ಉಡುಪಿ: ಕೊಂಕಣ ರೈಲ್ವೆ ಮಹತ್ವದ ಪ್ರಕಟಣೆಯನ್ನು ಹೊರಡಿಸಿದ್ದು ಅದೇನಂದರೆ ಕೊಂಕಣ ರೈಲು ಮಾರ್ಗದ ನಂದಿಕೂರು ರೈಲ್ವೆ ನಿಲ್ದಾಣದಲ್ಲಿ ಕೆಲವು ಕಾಮಗಾರಿಗಳು ನಡೆಯುವ ಹಿನ್ನೆಲೆ ಡಿಸೆಂಬರ್ 14ರ ವರೆಗೆ ಕೆಲವು ರೈಲುಗಳ ಸಂಚಾರದಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಮಾಹಿತಿ ನೀಡಿದೆ.
ಡಿಸೆಂಬರ್ 12 ಗುರುವಾರದಂದು ಬೆಳಿಗ್ಗೆ 7:10 ರಿಂದ 9:40 ರವರೆಗೆ ಎರಡುವರೆ ಗಂಟೆಗಳ ಕಾಲ ಕಾಮಗಾರಿ ನಡೆಯಲಿದ್ದು ಈ ವೇಳೆ ರೈಲು ನಂ. 10107 ಮಡಗಾಂವ್ ಜಂಕ್ಷನ್- ಮಂಗಳೂರು ಸೆಂಟ್ರಲ್ ಮೆಮು ರೈಲು 10 ನಿಮಿಷ ತಡವಾಗಲಿದೆ.
ಡಿಸೆಂಬರ್ 13ರ ಶುಕ್ರವಾರ ಬೆಳಗ್ಗೆ ಏಳು 10 ರಿಂದ 9:40 ರವರೆಗೆ ಮಾರ್ಗ ಬಂದಾಗಲಿದ್ದು ರೈಲು ನಂ. 20646 ಮಂಗಳೂರು ಸೆಂಟ್ರಲ್-ಮಡಗಾಂವ್ ಜಂಕ್ಷನ್ ವಂದೇ ಭಾರತ್ ಎಕ್ಸ್ಪ್ರೆಸ್ ಹಾಗೂ ರೈಲು ನಂಬರ್ 10107 ಮಡಂಗಾವ್ ಜಂಕ್ಷನ- ಮಂಗಳೂರು ಸೆಂಟ್ರಲ್ ಮೆಮು ರೈಲುಗಳ ಸಂಚಾರದಲ್ಲಿ 10 ನಿಮಿಷ ವಿಳಂಬವಾಗಲಿದೆ.
ಡಿಸೆಂಬರ್ 14 ಶನಿವಾರದಂದು ಬೆಳಗ್ಗೆ 7:30 ರಿಂದ 9:50 ವರೆಗೆ ಎರಡು ಗಂಟೆ 20 ನಿಮಿಷಗಳ ಕಾಲ ರೈಲು ಮಾರ್ಗ ಬಂದ್ ಆಗಲಿದ್ದು ರೈಲು ನಂಬರ್ 20646 ಮಂಗಳೂರು ಸೆಂಟ್ರಲ್ ಮಡಂಗಾವ್ ಜಂಕ್ಷನ್-ವಂದೇ ಭಾರತ್ ಎಕ್ಸ್ಪ್ರೆಸ್ ಹಾಗೂ ರೈಲು ನಂ. 10107 ಮಡಗಾವ್ ಜಂಕ್ಷನ್-ಮಂಗಳೂರು ಸೆಂಟ್ರಲ್ ಮೆಮು ರೈಲುಗಳ ಸಂಚಾರದಲ್ಲಿ 20 ನಿಮಿಷ ವಿಳಂಬವಾಗಲಿದ್ದು ಪ್ರಯಾಣಿಕರು ಸಹಕರಿಸಬೇಕಾಗಿ ಪ್ರಕಟಣೆಯಲ್ಲಿ ಮನವಿ ಮಾಡಲಾಗಿದೆ