
ವಿಪರೀತ ಮಳೆಯ ಕಾರಣ,ಈರುಳ್ಳಿ ಬೆಳೆಗೆ ಭಾರಿ ನಷ್ಟ ಉಂಟಾಗಿದ್ದು ಇದೀಗ ಮಾರುಕಟ್ಟೆಗೆ ಸಾಗಿಸಬೇಕು ಅನ್ನುವಷ್ಟರಲ್ಲಿ ದರ ಕುಸಿತ ಕಂಡಿದೆ. ಇದರಿಂದ ಈರುಳ್ಳಿ ಬೆಳೆದ ರೈತ ಕಣ್ಣೀರಿಡುವಂತಾಗಿದೆ.
ಕಳೆದ ಬಾರಿ ಸುರಿದ ಬಾರಿ ಮಳೆಗೆ ಈರುಳ್ಳಿ ಬೆಳೆಯಲ್ಲಿ ನಷ್ಟ ಉಂಟಾಗಿದ್ದು, ಅಳಿದುಳಿದ ಈರುಳ್ಳಿಯನ್ನು ಮಾರುಕಟ್ಟೆಗೆ ಸಾಗಿಸಿದರೆ ಅದರ ಬೆಲೆ ಪಾತಾಳಕ್ಕೆ ಕುಸಿದಿದೆ .ಕ್ವಿಂಟಾಲ್ ಗೆ 400 ರಿಂದ 500 ರೂ ಗೆ ಮಾರಾಟವಾಗುತ್ತಿದೆ. ಇದರಿಂದ ವಾಹನದ ಬಾಡಿಗೆಯು ಸಿಗುತ್ತಿಲ್ಲ ಎಂದು ರೈತರು ಗೋಳಾಡುವಂತಾಗಿದೆ.






