
ರೆಂಜಾಳ ಗ್ರಾಮ ಪಂಚಾಯತ್ & ಪ್ರೇರಣಾ ಸಂಜೀವಿನಿ ಒಕ್ಕೂಟ ಇವರ ಸಹಯೋಗದೊಂದಿಗೆ ದಿನಾಂಕ 21/01/2026 ನೇ ಬುಧವಾರ ರೆಂಜಾಳ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಸ್ವಚ್ಛತಾ ಕಾರ್ಯಕ್ರಮ ನಡೆಯಿತು
ರೆಂಜಾಳ ಮಹಾಲಕ್ಷ್ಮಿ ನಗರದಿಂದ ರೆಂಜಾಳ ಶಾಲೆಯವರೆಗೆ – ತಂಡದ ಮುಖ್ಯಸ್ಥರು ಶ್ರೀಮತಿ ಸುರೇಖಾ ಕೋಟ್ಯಾನ್ & ಪ್ರತಿಮಾ ಹಾಗೂ ರೆಂಜಾಳ ಶಾಲೆಯಿಂದ ರೇಷನ್ ಅಂಗಡಿವರೆಗೆ- ತಂಡದ ಮುಖ್ಯಸ್ಥರು ಶ್ರೀಮತಿ ಸುಜಯ ಪೂಜಾರಿ & ಮಲ್ಲಿಕಾ ಆಚಾರ್ಯ ಮತ್ತು ರೇಷನ್ ಅಂಗಡಿಯಿಂದ ಮಂಜೊಟ್ಟುವರೆಗೆ – ತಂಡದ ಮುಖ್ಯಸ್ಥರು ಶ್ರೀಮತಿ ಸುಕುಮಾರಿ ಹೆಗ್ಡೆ & ವಿದ್ಯಾ ಹೆಗ್ಡೆ ಹಾಗೂ ಮಂಜೊಟ್ಟುವಿನಿಂದ ಪೆರಾಲ್ದಬೆಟ್ಟುವರೆಗೆ. ತಂಡದ ಮುಖ್ಯಸ್ಥರು- ಶ್ರೀಮತಿ ಕಮಲಾಕ್ಷ್ಮಿ ರೈ & ಜೆಸಿಂತಾ ಪಾಯ್ಸ್, ಆಯಾಯ ಪರಿಸರದ ಸಾರ್ವಜನಿಕರು ತಮಗೆ ಹತ್ತಿರದ ತಂಡವನ್ನು ಸೇರಿಕೊಂಡು ಸ್ವಚ್ಛತೆಗೆ ಸಹಕರಿಸಿದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷರು,ಸದಸ್ಯರು,ಸಿಬ್ಬಂದಿಗಳು ವಿವಿಧ ಸಂಘ ಸಂಸ್ಥೆಗಳ ಸದಸ್ಯರು ಗ್ರಾಮಸ್ಥರು ಉಪಸ್ಥಿತರಿದ್ದರು












