
ಕಾರ್ಕಳ: ರಾಷ್ಟ್ರೀಯ ಕಲರಿಂಗ್ ಮತ್ತು ಹಸ್ತಾಕ್ಷರ ಸ್ಪರ್ಧೆ -2025ನೇ ಸಾಲಿನ ಅತ್ಯುತ್ತಮ ಚಿತ್ರಬಣ್ಣ ಸ್ಪರ್ಧೆಯಲ್ಲಿ ಶ್ರೀ ಶ್ರೀ ರವಿಶಂಕರ ವಿದ್ಯಾಮಂದಿರ ಕಾರ್ಕಳದ ಚರಿತ್ (ಯುಕೆಜಿ),ಸ್ರೋಣಿ ಜಿ. ಬೋಕ್ದೆ (1ನೇ ತರಗತಿ), ಹಿಮಾನಿ ಎಂ. ಕುಬಾಲ್ (2ನೇ ತರಗತಿ), ದಕ್ಷ್ ಡಿ. ಶೆಟ್ಟಿ(3ನೇ ತರಗತಿ )ಹಾಗೂ ಶ್ರದ್ಧಾ ಶ್ರೀನಿವಾಸ್ (6ನೆೇ ತರಗತಿ) ಇವರು ಭಾಗವಹಿಸಿ 2025 ನೇ ಸಾಲಿನ ರಾಷ್ಟ್ರೀಯ ಕಲಾ ಗೌರವ ಪ್ರಶಸ್ತಿಯನ್ನು ಪಡೆದಿರುತ್ತಾರೆ. ಹಾಗೆಯೇ ಅತ್ಯುತ್ತಮ ಹಸ್ತಾಕ್ಷರ ಸ್ಪರ್ಧೆಯಲ್ಲಿ ರಿಷಬ್ ಆರ್.ಭಟ್ (3ನೆೇ ತರಗತಿ ), ಶ್ರೀಯಾ ಪೂಜಾರಿ (7ನೇ ತರಗತಿ )ಮತ್ತು ಇಶಾನ್ ಹೆಗ್ಡೆ (8ನೇ ತರಗತಿ )ಇವರು ಭಾಗವಹಿಸಿ 2025 ನೇ ಸಾಲಿನ ರಾಷ್ಟ್ರೀಯ ಕಲಾಭೂಷಣ ಪ್ರಶಸ್ತಿಯನ್ನು ಪಡೆದಿರುತ್ತಾರೆ. ಸಾಧನೆಗೈದ ಈ ವಿದ್ಯಾರ್ಥಿಗಳಿಗೆ ಶಾಲೆಯ ಪ್ರಾಂಶುಪಾಲರಾದ ಶ್ರೀಮತಿ ಸೋನಲ್ ಆರ್. ಕಾಮತ್ ಹಾಗೂ ಶಿಕ್ಷಕ ವೃಂದ ಹಾರ್ದಿಕ ಅಭಿನಂದನೆಗಳನ್ನು ತಿಳಿಸಿರುತ್ತಾರೆ.





