
ಸ್ಟೆಮ್ ಇನೋವೇಷನ್ ಲೀಗ್ ಆಯೋಜಿಸಿದ್ದ ‘ವಿಜ್ಞಾನ ಮಾದರಿ ಸ್ಪರ್ಧೆ’ಯಲ್ಲಿ ಕಾರ್ಕಳ ಜ್ಞಾನಸುಧಾ ಆಂಗ್ಲ ಮಾಧ್ಯಮ ಪ್ರೌಢಶಾಲೆ, ಗಣಿತನಗರದ 9ನೇ ತರಗತಿಯ ವಿದ್ಯಾರ್ಥಿಗಳಾದ ಚಿನ್ಮಯ್ ಎ ಶೆಟ್ಟಿ ಮತ್ತು ಅಭಿನವ್ ವಿ ಎಸ್., ಇವರು ಭಾಗವಹಿಸಿ, ಆಗಸ್ಟ್ 2ರಂದು ದೆಹಲಿಯಲ್ಲಿ ನಡೆಯುವ ರಾಷ್ಟಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿರುತ್ತಾರೆ. ವಿದ್ಯಾರ್ಥಿಗಳನ್ನು ಸಂಸ್ಥೆಯ ಅಧ್ಯಕ್ಷರಾದ ಡಾ. ಸುಧಾಕರ್ಶೆ ಟ್ಟಿಯವರು ಅಭಿನಂದಿಸಿ ಶುಭ ಹಾರೈಸಿರುತ್ತಾರೆ.





