29.1 C
Udupi
Monday, February 9, 2026
spot_img
spot_img
HomeBlogರಾಜ್ಯ ರಾಜಕಾರಣದಲ್ಲಿ ಜಾಹೀರಾತು ಸಮರ: ಗಾಂಧೀಜಿ ಚಿತ್ರಣಕ್ಕೆ ತೀವ್ರ ವಿರೋಧ

ರಾಜ್ಯ ರಾಜಕಾರಣದಲ್ಲಿ ಜಾಹೀರಾತು ಸಮರ: ಗಾಂಧೀಜಿ ಚಿತ್ರಣಕ್ಕೆ ತೀವ್ರ ವಿರೋಧ

ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ಜಾಹೀರಾತು ಸಮರ ತೀವ್ರಗೊಂಡಿದ್ದು, ವಿಬಿ ಜಿರಾಮ್‌ಜಿ ವಿಚಾರವಾಗಿ ಕಾಂಗ್ರೆಸ್ ವಿರುದ್ಧ ಬಿಜೆಪಿ ಬಿಡುಗಡೆ ಮಾಡಿದ ಹೊಸ ಜಾಹೀರಾತು ಭಾರೀ ವಿವಾದಕ್ಕೆ ಕಾರಣವಾಗಿದೆ. ಜಾಹೀರಾತಿನಲ್ಲಿ ಮಹಾತ್ಮ ಗಾಂಧೀಜಿ ಕಾಂಗ್ರೆಸ್ ನಾಯಕರಿಗೆ ದೊಣ್ಣೆಯಿಂದ ಹೊಡೆಯುವಂತೆ ಚಿತ್ರಿಸಿರುವುದು ರಾಜಕೀಯ ವಲಯದಲ್ಲಿ ಕಿಡಿ ಹೊತ್ತಿಸಿದೆ.

ಈ ಕುರಿತು ಸಾಮಾಜಿಕ ಜಾಲತಾಣ ‘ಎಕ್ಸ್’ನಲ್ಲಿ ಪ್ರತಿಕ್ರಿಯಿಸಿದ ಪ್ರಿಯಾಂಕ್ ಖರ್ಗೆ, “ಒಮ್ಮೆ ಗೋಡ್ಸೆಯಿಂದ ಗಾಂಧೀಜಿಯ ಹತ್ಯೆಯಾಯಿತು, ಈಗ ಗೋಡ್ಸೆವಾದಿಗಳಿಂದ ಗಾಂಧಿವಾದದ ಹತ್ಯೆ ನಡೆಯುತ್ತಿದೆ” ಎಂದು ಹೇಳಿದ ಅವರು ಅಹಿಂಸೆಯ ಪ್ರತೀಕವಾದ ಗಾಂಧೀಜಿಯವರನ್ನು ಅವಮಾನಿಸಲಾಗುತ್ತಿದೆ ಎಂದು ಅವರು ಆರೋಪಿಸಿದರು.

ಗಾಂಧೀಜಿ ಎಂದಿಗೂ ಹಿಂಸೆಯ ಮಾರ್ಗ ಅನುಸರಿಸಿದವರಲ್ಲ. ಆದರೆ ಬಿಜೆಪಿ ಮತ್ತು ಆರೆಸ್ಸೆಸ್ ಗಾಂಧೀಜಿಯ ತತ್ವಗಳನ್ನು ವಿಕೃತವಾಗಿ ಚಿತ್ರಿಸುತ್ತಿವೆ ಎಂದು ಆರೋಪಿಸಿ, ಅವರ ಸಿದ್ಧಾಂತಗಳನ್ನು ರಕ್ಷಿಸುವ ಅಗತ್ಯವಿದೆ ಎಂದು ಕರೆ ನೀಡಿದರು.

ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ರಾಜಕೀಯ ಪಕ್ಷಗಳು ಮಹಾಪುರುಷರನ್ನು ಸಿದ್ಧಾಂತಗಳ ಹೆಸರಿನಲ್ಲಿ ಬಳಸಿಕೊಳ್ಳುತ್ತಿರುವುದು ಸಾರ್ವಜನಿಕ ಚರ್ಚೆಗೆ ಕಾರಣವಾಗಿದ್ದು, ಈ ವಿಚಾರದಲ್ಲಿ ಬಿಜೆಪಿ ಯಾವ ರೀತಿಯ ಪ್ರತಿಕ್ರಿಯೆ ನೀಡಲಿದೆ ಎಂಬುದು ಕುತೂಹಲ ಮೂಡಿಸಿದೆ.

spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page