23.8 C
Udupi
Friday, March 20, 2026
spot_img
spot_img
HomeBlogರಾಜ್ಯ ಜಾನಪದ ಪ್ರಶಸ್ತಿ ಪುರಸ್ಕೃತ,ಕಬ್ಬಿನಾಲೆ ಗುಲಾಬಿ ಗೌಡ್ತಿ ಇವರಿಗೆ ಅಭಿನಂದನೆ

ರಾಜ್ಯ ಜಾನಪದ ಪ್ರಶಸ್ತಿ ಪುರಸ್ಕೃತ,ಕಬ್ಬಿನಾಲೆ ಗುಲಾಬಿ ಗೌಡ್ತಿ ಇವರಿಗೆ ಅಭಿನಂದನೆ

ವಿಶ್ವ ಮಹಿಳಾ ದಿನಾಚರಣೆಯ ಈ ಸಂದರ್ಭದಲ್ಲಿ ಕಾರ್ಕಳ ಬಿಜೆಪಿ ಮಹಿಳಾ ಮೋರ್ಚಾ ವತಿಯಿಂದ ಶಾಸಕರಾದ ಸುನಿಲ್ ಕುಮಾರ್ ಅವರ ಮಾರ್ಗದರ್ಶನದಂತೆ ರಾಜ್ಯ ಮಟ್ಟದ ಕರ್ನಾಟಕ ಜಾನಪದ ಅಕಾಡೆಮಿ ಗೌರವ ಪ್ರಶಸ್ತಿ ಪುರಸ್ಕೃತ ಹಿರಿಯರಾದ ಶ್ರೀಮತಿ ಗುಲಾಬಿ ಗೌಡ ಇವರಿಗೆ ಅವರ ಮನೆಗೆ ತೆರಳಿ ಗೌರವ ಅಭಿನಂದನೆ ಸಲ್ಲಿಸಲಾಯಿತು.


ಈ ಸಂದರ್ಭದಲ್ಲಿ ಮಾತನಾಡಿದ ರವೀಂದ್ರ ಕುಮಾರ್ ಅವರು ತೀರ ಹಿಂದುಳಿದ ಗ್ರಾಮ ಕಬ್ಬಿನಾಲೆಯ ಮೆದಿಪು ಮಲೆಕುಡಿಯ ಸಮುದಾಯದ ಬಡಕುಟುಂಬದಲ್ಲಿ ಹುಟ್ಟಿ ಬೆಳೆದು , ಸುಮಾರು 50 ವರ್ಷಗಳಿಂದ ಪಾರಂಪರಿಕವಾಗಿ ಬಂದ ಗಿಡ ಮೂಲಿಕೆ ನಾಟಿ ವೈದ್ಯ ಪದ್ಧತಿಯಲ್ಲಿ ಸುಮಾರು 16 ಬಗೆಯ ಅನಾರೋಗ್ಯಗಳಿಗೆ ಔಷಧಿ ನೀಡುತ್ತಾ ಹಾಗೂ ಆಸ್ಪತ್ರೆಗಳು ವಿರಳವಾಗಿದ್ದ ಆ ಕಾಲದಲ್ಲಿ 200 ಕ್ಕೂ ಅಧಿಕ ಮಹಿಳೆಯರಿಗೆ ಸಾಂಪ್ರದಾಯಿಕ ಹೆರಿಗೆ ಮಾಡಿಸಿ ತನ್ನ ಕೈಗುಣದೊಂದಿಗೆ ಕಬ್ಬಿನಾಲೆ ಪರಿಸರದಲ್ಲಿ ಬದುಕಿನುದ್ದಕ್ಕೂ ನಿಸ್ವಾರ್ಥ ಸೇವೆಗೈದ 89 ವರ್ಷ ವಯಸ್ಸಿನ ಹಿರಿ ಜೀವ ಗುಲಾಬಿ ಗೌಡ್ತಿ ಅವರ ಅನುಭವ ಹಿರಿದು. ತಮ್ಮ ವೈಯಕ್ತಿಕ ಸಂಕಷ್ಟಗಳ ನಡುವೆ ಅವರ ಸಾಮಾಜಿಕ ಕಳಕಳಿಯ ಜೀವನವೇ ಇಂದಿನ ಮಹಿಳೆಯರಿಗೆ ಸ್ಪೂರ್ತಿ ನೀಡುವಂತಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಕ್ಷೇತ್ರ ಪ್ರಧಾನ ಕಾರ್ಯದರ್ಶಿಗಳಾದ ಸುರೇಶ್ ಶೆಟ್ಟಿ, ಸತೀಶ್ ಪೂಜಾರಿ ಬೋಳ, ಮಹಿಳಾ ಮೋರ್ಚಾದ ಅಧ್ಯಕ್ಷರಾದ ವಿನಯ ಡಿ ಬಂಗೇರ, ಜಿಲ್ಲಾ ಉಪಾಧ್ಯಕ್ಷರಾದ ಮಾಲಿನಿ ಶೆಟ್ಟಿ ಪ್ರಮುಖರುಗಳಾದ ಜ್ಯೋತಿ ಹರೀಶ್, ಸಂತೋಷ್ ಶೆಟ್ಟಿ, ಯುವ ಮೋರ್ಚಾದ ರಾಕೇಶ್ ಶೆಟ್ಟಿ, ಧನುಶ್ ಹಾಗೂ ಜಗದೀಶ್ ಪೂಜಾರಿ, ಗಂಗಾಧರ್ ಗೌಡ, ವಿಠಲ್ ಕೋಟ್ಯಾನ್, ಕೃಷ್ಣ ಪ್ರಸಾದ್ ಭಟ್, ವಿಠಲ ಗೌಡ, ಮಹಿಳಾ ಮೋರ್ಚಾದ ಪ್ರಮುಖರುಗಳಾದ ಸುಮರವಿಕಾಂತ್, ಸುಮಾಕೇಶವ್, ಮಮತಾ ಸುವರ್ಣ, ಪಲ್ಲವಿ ಪ್ರವೀಣ್,ಭಾರತಿ ಅಮೀನ್, ಸುಚಿತ್ರಾ ಶೆಟ್ಟಿ, ಲಕ್ಷ್ಮೀ ಕಿಣಿ,ಮಮತಾ ನಾಯಕ್, ಗೀತಾ ಕಲ್ಲೊಟ್ಟೆ , ಶಿವಾನಿ ದೇವಾಡಿಗ, ಸುಜಾತಾ , ಸುಶೀಲ, ಯಮುನಾ, ಸುವರ್ಣ, ಪ್ರಭಾವತಿ ಉಪಸ್ಥಿತರಿದ್ದರು.

spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page