ಬೆಂಗಳೂರು ಅಭಿವೃದ್ಧಿ ಸಚಿವ, ಡಿಸಿಎಂ ಡಿ.ಕೆ.ಶಿವಕುಮಾರ್ ಘೋಷಣೆ

ಮೊನ್ನೆಯಷ್ಟೇ ಜಿ.ಟಿ ಮಾಲ್ ನಲ್ಲಿ ನಡೆದ ಪಂಚೆ ವಿಚಾರಕ್ಕೆ ಸಂಬಂಧಿಸಿದಂತೆ, ವಿಧಾನಸಭೆಯಲ್ಲಿ ಮಾತನಾಡುವ ಸಂದರ್ಭದಲ್ಲಿ ಡಿಸಿಎಂ ಡಿ.ಕೆ ಶಿವಕುಮಾರ್, ರಾಜ್ಯದ ಎಲ್ಲಾ ಮಾಲ್ ಗಳಿಗೆ ಮಾರ್ಗಸೂಚಿಯನ್ನು ತರಲಾಗುವುದು. ಪಂಚೆ ನಮ್ಮ ಸಂಸ್ಕೃತಿ, ಜಿಟಿ ಮಾಲ್ ನಲ್ಲಿ ನಡೆದ ಘಟನೆ ಮತ್ತೆ ಮರುಕಳಿಸಬಾರದು ಎಂದು ತಿಳಿಸಿದ್ದಾರೆ.
ಇನ್ನು ಜಿ.ಟಿ.ಮಾಲ್ ಪೂರ್ಣ ಪ್ರಮಾಣದ ತೆರಿಗೆಯನ್ನು ಪಾವತಿಸಿಲ್ಲ. ಸದ್ಯಕ್ಕೆ ಮಾಲ್ ಅನ್ನು ಮುಚ್ಚಿಸಲಾಗಿದೆ ಎಂದಿದ್ದಾರೆ ಈ ಸಂದರ್ಭದಲ್ಲಿ ಆರ್ ಅಶೋಕ್, ಮಾಲ್ ಗಳಿಗೆ ಮಾರ್ಗಸೂಚಿ ತೊಂದರೆ ಸಾಲದು ಲೈಸೆನ್ಸ್ ನೀಡುವ ಸಂದರ್ಭದಲ್ಲಿ ಗ್ರಾಮೀಣ ಪ್ರದೇಶದ ಜನರಿಗೆ ಮುಕ್ತ ಅವಕಾಶ ನೀಡುವಂತೆ ಶರತುಗಳನ್ನು ವಿಧಿಸಬೇಕು ಎಂದು ಸಲಹೆ ನೀಡಿದ್ದಾರೆ.








