
ಕೇರಳ: ಇಲ್ಲಿನ ಕಣ್ಣೂರಿನಲ್ಲಿ 18ರ ಯುವತಿಯೊಬ್ಬಳು ಯೂಟ್ಯೂಬ್ ನೋಡಿಕೊಂಡು ಸಂಪೂರ್ಣ ತೂಕ ಇಳಿಸುವ ಡಯಟ್ ಪ್ಲಾನ್ ಅನುಸರಿಸಿ ಪ್ರಾಣ ಕಳೆದುಕೊಂಡಿರುವ ಘಟನೆ ನಡೆದಿದೆ.
ಕೂತುಪರಂ ಮೇರುವಂಬೈ ಮೂಲದ ಶ್ರೀನಂದ ಎಂಬ ಯುವತಿ ಮಟ್ಟನ್ನೂರಿನ ಪಳಸ್ಸಿ ರಾಜಾ ಎನ್ಎಸ್ಎಸ್ ಕಾಲೇಜಿನಲ್ಲಿ ಪದವಿ ಪೂರ್ವ ವಿದ್ಯಾರ್ಥಿನಿಯಾಗಿ ವ್ಯಾಸಂಗ ಮಾಡುತ್ತಿದ್ದು ತೂಕ ಕಡಿಮೆ ಮಾಡಲು ಯೂಟ್ಯೂಬ್ ನೋಡುತ್ತಾ ಡಯಟ್ ಮಾಡುತ್ತಿದ್ದಳು.
ಆಹಾರವನ್ನು ಸರಿಯಾಗಿ ಸೇವಿಸದೆ ಇದ್ದಿದ್ದರಿಂದ ದಿನಕಳೆದಂತೆ ಆಕೆಯ ಆರೋಗ್ಯದಲ್ಲಿ ಕ್ಷೀಣವಾಗಿ ಅನೋರೆಕ್ಸಿಯಾ ನರ್ವೋಸಾದಿಂದ ಮೃತಪಟ್ಟಿದ್ದಾರೆ ಎಂದು ವೈದ್ಯ ಡಾ. ನಾಗೇಶ್ ಪ್ರಭು ತಿಳಿಸಿದ್ದಾರೆ.
ಆರೋಗ್ಯ ಹದಗೆಡುತ್ತಿದ್ದಂತೆ ಶ್ರೀನಂದ ಅವರನ್ನು ತಲಸ್ಸೆಯಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆಕೆಯ ಸ್ಥಿತಿ ಗಂಭೀರವಾಗಿರುವುದರಿಂದ ಹೆಚ್ಚಿನ ಚಿಕಿತ್ಸೆಗೆ ಕೋಝಿಕ್ಕೋಡ್ ನ ವೈದ್ಯಕೀಯ ಕಾಲೇಜಿಗೆ ಸ್ಥಳಾಂತರಿಸಿ ವೆಂಟಿಲೇಟರ್ ನಲ್ಲಿರಿಸಿದ್ದರೂ ಚಿಕಿತ್ಸೆ ಫಲಿಸದೆ ಕೊನೆಯುಸಿರೆಳೆದಿದ್ದಾರೆ.



















