
ಯುವಶಕ್ತಿ ಸಮೂಹ ಸಂಸ್ಥೆಗಳು, ಕಾಳಿಕಾಂಬಾ, ಕರಿಯಕಲ್ಲು ಇದರ ಆಶ್ರಯದಲ್ಲಿ ಯುವಶಕ್ತಿ ಎಜುಕೇಷನ್ ಸೊಸೈಟಿಯ ರಜತ ಮಹೋತ್ಸವದ ಅಂಗವಾಗಿ ಯುವಶಕ್ತಿ ಆಟದ ಮೈದಾನ ನವೀಕರಣಕ್ಕೆ ಗುದ್ದಲಿ ಪೂಜೆ ನೆರವೇರಿಸಲಾಯಿತು.
ಗುದ್ದಲಿ ಪೂಜೆ ನೆರವೇರಿಸಿದ ಕಾರ್ಕಳದ ಜನಪ್ರಿಯ ಶಾಸಕರು ಮಾಜಿ ಸಚಿವರಾಗಿರುವ ವಿ. ಸುನೀಲ್ ಕುಮಾರ್ ಮಾತನಾಡಿ ಯುವಶಕ್ತಿಯ ಸೇವಾ ಮನೋಭಾವನೆಯನ್ನು ಶ್ಲಾಘಿಸಿದರು. ಅಧ್ಯಕ್ಷತೆ ವಹಿಸಿ ಮಾತನಾಡಿದ ಎಜುಕೇಷನ್ ಸೊಸೈಟಿ ಅಧ್ಯಕ್ಷರಾದ ವಿಜಯ ಶೆಟ್ಟಿ ರಜತ ಮಹೋತ್ಸವ ಕಾರ್ಯಕ್ರಮಕ್ಕೆ ಎಲ್ಲರ ಸಹಕಾರ ಕೋರಿದರು.
ಸಂಚಾಲಕರಾದ ಅಬ್ದುಲ್ ಖಾಲಿಕ್ ಪ್ರಾಸ್ಥಾವಿಕ ಮಾತುಗಳನ್ನಾಡಿದರು. ವೇದಿಕೆಯಲ್ಲಿ ಪುರಸಭಾ ಉಪಾಧ್ಯಕ್ಷರಾದ ನೆಕ್ಲಾಜೆ ಗುತ್ತು ಪ್ರಶಾಂತ್ ಕೋಟ್ಯಾನ್, ನಿರ್ದೇಶಕರಾದ ವಸಂತ್ ಎಂ,ಸುಧಾಕರ್ ಪ್ರಭು, ಸುರೇಖಾ ಪ್ರದೀಪ್ ಕೋಟ್ಯಾನ್, ಚಂದ್ರಶೇಖರ ಹೆಗ್ಡೆ, ನವೀನ್ ಸುವರ್ಣ, ಮುಖ್ಯ ಶಿಕ್ಷಕಿ ನಳಿನಾಕ್ಷಿ ಹೆಗ್ಡೆ, ಮಹಿಳಾ ಮಂಡಲದ ಅಧ್ಯಕ್ಷೆ ಪ್ರಮೀಳಾ ಪ್ರಶಾಂತ್, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಧೀರಜ್ ರಾವ್ ಉಪಸ್ಥಿತರಿದ್ದರು. ಶಿವಾನಂದ ಬಂಗೇರ ನಿರೂಪಿಸಿದ ಕಾರ್ಯಕ್ರಮದಲ್ಲಿ ಸುರೇಶ ಮೊಯಿಲಿ ಸ್ವಾಗತಿಸಿ, ಪ್ರಮೀಳಾ ಪ್ರಶಾಂತ್ ವಂದಿಸಿದರು.























































