
ಕಾರ್ಕಳ: ಅ. 23ರಂದು ಕಾರ್ಕಳ ನಗರ ಪೊಲೀಸ್ ಉಪನಿರೀಕ್ಷಕ ಮರಳಿಧರ್ ನಾಯಕ್ ಅವರು ತಮ್ಮ ಸಿಬ್ಬಂದಿಗಳೊಂದಿಗೆ ಯರ್ಲಪಾಡಿ ಗ್ರಾಮದ ಕುಂಟಲಪಾಡಿಯಲ್ಲಿ ಅಕ್ರಮವಾಗಿ ಕಲ್ಲು ಗಣಿಗಾರಿಕೆ ನಡೆಸುತ್ತಿರುವ ಬಗ್ಗೆ ಬಂದ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ್ದು ಈ ವೇಳೆ ಆರೋಪಿ ಸಹಿತ ಕಲ್ಲುಗಳನ್ನು ವಶಪಡಿಸಿಕೊಂಡಿದ್ದಾರೆ.
ಆರೋಪಿ ಭೋಜ ಶೆಟ್ಟಿ 3,500 ಮೌಲ್ಯದ 300 ಸೈಜ್ ಶಿಲೆಕಲ್ಲುಗಳನ್ನು ಮಾರಾಟಕ್ಕಾಗಿ ಸಾಗಾಟ ಮಾಡಲು ಸಂಗ್ರಹ ಮಾಡಿದ್ದು ಅಲ್ಲದೆ ಗಣಿಗಾರಿಕೆ ಮಾಡಿದ ಸುಮಾರು 150 ಸೈಜ್ ಕಲ್ಲುಗಳನ್ನು ಲಾರಿಯಲ್ಲಿ ಲೋಡ್ ಮಾಡಿದ್ದರು. ಆಪಾದಿತ ಭೋಜ ಶೆಟ್ಟಿ ಯಾವುದೇ ಪರವಾನಿಗೆ ಹೊಂದದೆ ಅಕ್ರಮವಾಗಿ ಕಲ್ಲು ಗಣಿಗಾರಿಕೆ ನಡೆಸುತ್ತಿರುವುದಾಗಿ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಕೃತ್ಯಕ್ಕೆ ಸಂಬಂಧಿಸಿದ ಸೈಜು ಕಲ್ಲು, ಲಾರಿ, ಕಬ್ಬಿಣದ ಸುತ್ತೆ, ಕಬ್ಬಿಣದ ಚಮ್ಮಡಿಯನ್ನು ವಶಪಡಿಸಿಕೊಂಡಿದ್ದಾರೆ.



















































