
ಕುಂದಾಪುರ: ಸೋಮವಾರ ತಾಲೂಕಿನ ಮಾವಿನ ಕಟ್ಟೆಯ ಮೆಡಿಕಲ್ ಶಾಪ್ ನ ಲಕ್ಷ್ಮಿ ಎಂಬ ದಲಿತ ಯುವತಿಗೆ ಯಾಸ್ಮಿನ್ ಎಂಬ ಮುಸ್ಲಿಂ ಮಹಿಳೆಯೊಬ್ಬರು ಚಿಲ್ಲರೆ ವಿಚಾರವಾಗಿ ಹಲ್ಲೆಗೈದ ಘಟನೆ ನಡೆದಿದೆ.
ಮಾವಿನ ಕಟ್ಟೆಯ ಮೆಡಿಕಲ್ ಗೆ ಬಂದಿದ್ದ ಯಾಸ್ಮಿನ್ ಔಷಧ ಖರೀದಿಸಿ 500 ರೂಪಾಯಿ ಕೊಟ್ಟಿದ್ದು ಬಳಿಕ ಚಿಲ್ಲರೆ ಕೊಡಿ ಎಂದರೂ ಕೊಟ್ಟಿರಲಿಲ್ಲ. ಈ ವಿಚಾರವಾಗಿ ಲಕ್ಷ್ಮಿ ಜೊತೆ ಜಗಳ ಮಾಡಿದ ಯಾಸ್ಮಿನ್ ಆ ಮಹಿಳೆಯ ಮೇಲೆ ಹಲ್ಲೆ ನಡೆಸಿ ಅವಾಚ್ಯವಾಗಿ ಜಾತಿನಿಂದನೆ ಮಾಡಿರುವುದು ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಹಲ್ಲೆಗೊಳಗಾದ ಲಕ್ಷ್ಮಿ ಅವರನ್ನು ಕುಂದಾಪುರದ ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿದ್ದು ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಂ ಶಂಕರ್ ಆಸ್ಪತ್ರೆಗೆ ಭೇಟಿ ನೀಡಿ ಆರೋಗ್ಯ ವಿಚಾರಿಸಿದರು. ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿ ಘಟನೆ ಕುರಿತು ಕುಂದಾಪುರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಡಿವೈಎಸ್ಪಿ ನೇತೃತ್ವದಲ್ಲಿ ತನಿಖೆ ನಡೆಯಲಿದ್ದು ಆರೋಗ್ಯ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಮಾಹಿತಿ ನೀಡಿದರು.



















