
ನೆಲಮಂಗಲ: ಬೆಂಗಳೂರು ಹೊರವಲಯ ನೆಲಮಂಗಲ ನಗರದ ಖಾಸಗಿ ಕಲ್ಯಾಣ ಮಂಟಪದಲ್ಲಿ ಆಹ್ವಾನದ ಮೇರೆಗೆ ಮುಸ್ಲಿಂ ಮದುವೆಗೆ ಬಂದ ವ್ಯಕ್ತಿ ತಿಲಕ ಇಟ್ಕೊಂಡು ಊಟಕ್ಕೆ ಕುಳಿತಿದ್ದ ಎನ್ನುವ ಕಾರಣಕ್ಕೆ ಅರ್ಧದಲ್ಲೇ ಎಬ್ಬಿಸಿ ಅಪಮಾನ ಮಾಡಿರುವ ಘಟನೆ ನಡೆದಿದೆ.
ಅ. 26 ರಂದು ನೆಲಮಂಗಲದ ಖಾಸಗಿ ಮಂಟಪದಲ್ಲಿ ಮುಜಾಮಿಲ್ ಪಾಷ ಹಾಗೂ ಸಾನಿಯಾ ಎಂಬವರ ಮದುವೆ ನಡೆದಿದ್ದು ಈ ವೇಳೆ ಸಾನಿಯಾ ಕುಟುಂಬದ ಸ್ನೇಹಿತನಾದ ರಾಜು ಎಂಬವರು ಮದುವೆಗೆ ಹೋಗಿದ್ದರು. ಊಟಕ್ಕೆ ಕುಳಿತಿದ್ದ ವೇಳೆ ಸಮಿವುಲ್ಲಾ ಏಕಾಏಕಿ ಬಂದು, ‘ಆಹ್ವಾನ ನೀಡದೆ ಮದುವೆಗೆ ಏಕೆ ಬಂದೆ, ನಿನಗೆ ಊಟ ಹಾಕಲ್ಲ. ಮೇಲೆ ಏಳು ಎಂದು ಗಲಾಟೆ ಮಾಡಿದ್ದಾರೆ. ಈ ಗಲಾಟೆಯನ್ನು ಮದುವೆಗೆ ಹೋಗಿದ್ದ ಮತ್ತೊಬ್ಬ ವ್ಯಕ್ತಿ ಮೊಬೈಲ್ನಲ್ಲಿ ಸೆರೆ ಹಿಡಿದಿದ್ದು ಈ ಕುರಿತು ಸಾಮಾಜಿಕ ಮಾಧ್ಯಮದಲ್ಲಿ ಸಾಕಷ್ಟು ಚರ್ಚೆಯಾಗುತ್ತಿದೆ.






















































