
ಹೆಬ್ರಿ : ಮುದ್ರಾಡಿ ಎಂ. ಎನ್. ಡಿ. ಎಸ್ ಎಂ. ಅನುದಾನಿತ ಪ್ರೌಢ ಶಾಲೆಯಲ್ಲಿ ಅಲಯನ್ಸ್ ಕ್ಲಬ್ ಹೆಬ್ರಿ ಮತ್ತು ಅಲಯನ್ಸ್ ಕ್ಲಬ್ ಹೆಬ್ರಿ ಸಿಟಿ ಇದರ ವತಿಯಿಂದ ಕಾರ್ಕಳ ಸರಕಾರಿ ಪಾಲಿಟೆಕ್ನಿಕ್ ಕಾಲೇಜು ಇದರ ಸಹಯೋಗದಲ್ಲಿ ಎಸ್. ಎಸ್. ಎಲ್. ಸಿ ವಿದ್ಯಾಭ್ಯಾಸ ಕಲಿಯುವ ವಿದ್ಯಾರ್ಥಿಗಳಿಗೆ ವೃತ್ತಿ ಮಾರ್ಗದರ್ಶನ ಮಾಹಿತಿ ಕಾರ್ಯಾಗಾರ ಜ. 20 ರಂದು ನಡೆಯಿತು.
ಅಲಯನ್ಸ್ ಕ್ಲಬ್ ಸಂಸ್ಥೆಯ ಉದ್ದೇಶಗಳು, ಶಿಕ್ಷಣಕ್ಕೆ ನೀಡುವ ಪ್ರೋತ್ಸಾಹದ ಕುರಿತು ಅಲಯನ್ಸ್ ಕ್ಲಬ್ ಹೆಬ್ರಿ ಸಿಟಿ ಯ ಅಧ್ಯಕ್ಷರಾದ ಸುನಿತಾ ಹೆಬ್ಬಾರ್ ರವರು ಪ್ರಾಸ್ತಾವಿಕ ಮಾತುಗಳೊಂದಿಗೆ ಹೇಳಿದರು.
ಮಾಹಿತಿ ನೀಡಲು ಆಗಮಿಸಿದ ಕಾರ್ಕಳ ಸರಕಾರಿ ಪಾಲಿಟೆಕ್ನಿಕ್ ಕಾಲೇಜಿನ ಉಪನ್ಯಾಸಕರಾದ ಬಾಲಚಂದ್ರ ಹೆಬ್ಬಾರ್,ಯಶ್ವಿನ್ ರಾಜ್ ಜೆ, ಪ್ರಸಾದ್ ನಾತು ಎಂ. ಮತ್ತು ಸುಬ್ರಮಣ್ಯ ಭಟ್ ರವರು ಎಸ್. ಎಸ್. ಎಲ್. ಸಿ.ನಂತರ ಮುಂದೇನು ಎಂಬ ಬಗ್ಗೆ ತಿಳಿಸುತ್ತಾ, ವೃತ್ತಿ ಶಿಕ್ಷಣದ ವಿವಿಧ ಕೋರ್ಸ್ ಗಳ ಬಗ್ಗೆ ಮಾಹಿತಿ ನೀಡಿದರು.
ಅಲಯನ್ಸ್ ಕ್ಲಬ್ ಹೆಬ್ರಿ ಇದರ ಅಧ್ಯಕ್ಷರಾದ ಕೆ. ರಾಮಚಂದ್ರ ಭಟ್, ಕಾರ್ಯದರ್ಶಿ ಬಾಲಚಂದ್ರ ಎಂ.,ಅಲಯನ್ಸ್ ಕ್ಲಬ್ ಹೆಬ್ರಿ ಸಿಟಿ ಯ ಕೋಶಾಧಿಕಾರಿ ಅಮೃತಾ, ಶಾಲಾ ಆಡಳಿತ ಮಂಡಳಿಯ ಕಾರ್ಯದರ್ಶಿ
ಅಶೋಕ್ ಕುಮಾರ್ ಶೆಟ್ಟಿ ಯವರು ಉಪಸ್ಥಿತರಿದ್ದರು.
ಶಾಲಾ ಮುಖ್ಯ ಶಿಕ್ಷಕರಾದ ಬಲ್ಲಾಡಿ ಚಂದ್ರಶೇಖರ ಭಟ್ ಕಾರ್ಯಕ್ರಮ ನಿರೂಪಿಸಿ,ಸ್ವಾಗತಿಸಿದರು. ಅಲಯನ್ಸ್ ಕ್ಲಬ್ ಹೆಬ್ರಿ ಸಿಟಿ ಕಾರ್ಯದರ್ಶಿ ರಮ್ಯಕಾಂತಿ ವಂದಿಸಿದರು. ಶಿಕ್ಷಕರಾದ ಪಿ. ವಿ. ಆನಂದ, ರಘುಪತಿ ಹೆಬ್ಬಾರ್, ಶ್ಯಾಮಲಾ, ಚಂದ್ರಕಾಂತಿ ಹೆಗ್ಡೆ ಹಾಜರಿದ್ದರು.ಶಾಲಾ ಮಕ್ಕಳು ಮಾಹಿತಿ ಕಾರ್ಯಗಾರದ ಪ್ರಯೋಜನ ಪಡೆದುಕೊಂಡರು.








