27.7 C
Udupi
Monday, April 13, 2026
spot_img
spot_img
HomeBlogಮಾಜಿ ಸೈನಿಕರ ವೇದಿಕೆ ರಿ. ಕಾರ್ಕಳ- ಮೂಡಬಿದಿರೆ ಮತ್ತು ಸ್ವಚ್ಛ ಕಾರ್ಕಳ ಬ್ರಿಗೇಡ್ ವತಿಯಿಂದ,

ಮಾಜಿ ಸೈನಿಕರ ವೇದಿಕೆ ರಿ. ಕಾರ್ಕಳ- ಮೂಡಬಿದಿರೆ ಮತ್ತು ಸ್ವಚ್ಛ ಕಾರ್ಕಳ ಬ್ರಿಗೇಡ್ ವತಿಯಿಂದ,

ಆನೆಕೆರೆ ಅಮರ್ ಜವಾನ್ ಸ್ಮಾರಕದಲ್ಲಿ”ಕಾರ್ಗಿಲ್ ವಿಜಯ ದಿವಸ್”

ಮಾಜಿ ಸೈನಿಕರ ವೇದಿಕೆ(ರಿ.), ಮೂಡಬಿದ್ರೆ-ಕಾರ್ಕಳ ಮತ್ತು ಸ್ವಚ್ಛ ಕಾರ್ಕಳ ಬ್ರಿಗೇಡ್ ವತಿಯಿಂದ ಕಾರ್ಕಳದ ಆನೆಕೆರೆ ಅಮರ್ ಜವಾನ್ ಸ್ಮಾರಕದಲ್ಲಿ ಕಳೆದ 5 ವರ್ಷದಿಂದ ನಡೆಸುಕೊಂಡು ಬರುತ್ತಿರುವ ಕಾರ್ಗಿಲ್ ವಿಜಯ ದಿವಸದ, 25ನೇ ವರ್ಷಾಚರಣೆಯ ಸಲುವಾಗಿ ದಿನಾಂಕ ಜುಲೈ 26, 2024ರ ಶುಕ್ರವಾರ ಬೆಳಗ್ಗೆ 7 ಗಂಟೆಗೆ, ನಮ್ಮ ಸುಂದರ ನಾಳೆಗಾಗಿ, ತಮ್ಮ ಅಮೂಲ್ಯ ಪ್ರಾಣ ಒತ್ತೆಯಿಟ್ಟು ಹೋರಾಡಿ, ಮಡಿದ ವೀರ ಸೇನಾನಿಗಳನ್ನು ಸ್ಮರಿಸಿ, ಪುಷ್ಪಾರ್ಚನೆ ಮಾಡಲಾಯಿತು. ಮಾಜಿ ಸೈನಿಕರ ವೇದಿಕೆಯ ಜಿನಚಂದ್ರ ಜೈನ್ ರವರು ಎಲ್ಲರನ್ನೂ ಸ್ವಾಗತಿಸಿದರು ಹಾಗೂ ಅಧ್ಯಕ್ಷರಾದ ವಿಜಯ್ ಫೆರ್ನಾಂಡಿಸ್ ರವರು ಕಾರ್ಗಿಲ್ ಯುದ್ಧದ ಬಗ್ಗೆ ವಿವರಿಸಿ, ನಮ್ಮ ವೀರ ಯೋಧರ ಸಾಹಸಗಾತೆಗಳ ಪ್ರಸ್ತುತಪಡಿಸಿ, ಕಾರ್ಗಿಲ್ ವಿಜಯ್ ದಿವಸ್ ನ ಮಹತ್ವವನ್ನು ವಿವರಿಸಿದರು.


ಮಾಜಿ ಸೈನಿಕರ ವೇದಿಕೆಯ ಸದಸ್ಯರಾದ ವಾಸುದೇವ ಶೇರಿಗಾರ್ ಧನ್ಯವಾದ ಸಮರ್ಪಿಸಿದರು.
ಸ್ವಚ್ಛ ಕಾರ್ಕಳ ಬ್ರಿಗೇಡ್ ಮತ್ತು ಮಾಜಿ ಸೈನಿಕರ ವೇದಿಕೆಯ ಹಲವು ಸದಸ್ಯರು ಉಪಸ್ಥಿತರಿದ್ದರು.

spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page