
ಹಿಂದಿ ಕಿರುತೆರೆಯ ‘ಮಹಾಭಾರತ’ ಸೀರಿಯಲ್‌ನಲ್ಲಿ ಕರ್ಣನ ಪಾತ್ರ ನಿರ್ವಹಿಸಿ ಜನಮನ್ನಣೆ ಗಳಿಸಿದ್ದ ನಟ ಪಂಕಜ್ ಧೀರ್ ಅವರು ಅನಾರೋಗ್ಯದಿಂದ ಸಾವನ್ನಪ್ಪಿದ್ದಾರೆ.
ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಪಂಕಜ್ ಅವರು ಕಳೆದ ಕೆಲವು ತಿಂಗಳುಗಳಿಂದ ಚಿಕಿತ್ಸೆ ಪಡೆಯುತ್ತಿದ್ದು ಇತ್ತೀಚೆಗೆ ಕಾಯಿಲೆ ತೀವ್ರಗೊಂಡಿತ್ತು. ಇದೀಗ ಚಿಕಿತ್ಸೆ ಫಲಿಸದೇ ಕೊನೆಯುಸಿರೆಳೆದಿದ್ದಾರೆ.
ಪಂಕಜ್ ಧೀರ್ ಅವರು ಚಂದ್ರಕಾಂತ, ಬಧೋ ಬಹು, ಜೀ ಹಾರರ್ ಶೋ, ಕಾನೂನ್, ಸಸುರಲ್ ಸಿಮಾರ್ ಕಾ, ಸೋಲ್ಜರ್, ಅಂದಾಜ್, ಬಾದ್‌ಶಾ, ಮತ್ತು ತುಮ್ಕೋ ನಾ ಭೂಲ್ ಪಾಯೆಂಗೆಯಂತಹ ಟಿವಿ ಧಾರಾವಾಹಿಗಳಲ್ಲಿ ನಟಿಸಿದ್ದಾರೆ.








