
ಮಣಿಪಾಲ: ಜಪ್ಪು ಮಂಕುತೋಟ ಅನಿಲ್ ಶೆಟ್ಟಿ ಅವರ ಯಜಮಾನಿಕೆಯ, ಉಭಯ ಜಿಲ್ಲೆಗಳ ಕಂಬಳ ಕೂಟಗಳಲ್ಲಿ ಹೆಸರು ಮಾಡಿದ “ನಾಗು”ಹೃದಯಾಘಾತದಿಂದ ಇಂದು ಅಸುನೀಗಿದೆ.
ಮೊದಲನೆಯದಾಗಿ ಬೈಂದೂರಿನ ಎಲ್ಲಾರು ಬಂಡರ ಮನೆಗೆ ಸೇರಿದ ಕೋಣ ಇದಾಗಿದ್ದು ಎರಡು ವರ್ಷಗಳ ಹಿಂದೆ ಜಪ್ಪು ಮಂಕು ತೋಟ ಅನಿಲ್ ಶೆಟ್ಟಿ ಇದನ್ನು ಖರೀದಿ ಮಾಡಿದ್ದರು. ನಾಲ್ಕು ವರ್ಷಗಳ ಹಿಂದೆಯಷ್ಟೇ ಸೀನಿಯರ್ ವಿಭಾಗಕ್ಕೆ ಎಂಟ್ರಿ ಪಡೆದ ನಾಗು, ಹಲವು ಪ್ರಶಸ್ತಿಗಳನ್ನು ಗೆದ್ದುಕೊಂಡಿದೆ.











