26.8 C
Udupi
Sunday, March 22, 2026
spot_img
spot_img
HomeBlogಮಂಗಳ

ಮಂಗಳ

ಕಥೆ (ಭಾಗ- 34)

ಚೇತನ್ ವರ್ಕಾಡಿ

ಮಧುವಿನ ಕಾರು ಕಣ್ಣಿಂದ ಮರೆಯಾಗುವ ತನಕವೂ ನೋಡುತ್ತಲೆ ಇದ್ದಳು.ಎಲ್ಲವೂ ಆಶ್ಚರ್ಯ‌ಕರವಾಗಿ ಕಾಣುತ್ತಿದೆ! ಜೀವಂತ ಶವವಾಗಿದ್ದ ಮಧು ಕೇವಲ ನಾಲ್ಕು ತಿಂಗಳಲ್ಲೆ ಹಿಂದಿನ ಮಧುವಾಗಿ ಗುಣಮುಖವಾದ ಅದ್ಭುತ ಕಥೆಯ ಗುಟ್ಟು ಏನಾಗಿರಬಹು‌ದು ಅನ್ನೊ ಪ್ರಶ್ನೆ ಒಂದು ಕಡೆಯಾದರೆ, ಮಧುವಿನ ಪಕ್ಕ ಅವರ ಮನೆಕೆಲಸಕ್ಕೂ ಸರಿಸಮಾನ‌ವಾಗಿ ನಿಲ್ಲದ ಮಂಗಳ ಅವನ ಪಕ್ಕ ಒಂದೇ ಕಾರಿನಲ್ಲಿ ಕುಳಿತು ಬರವುದೆಂದರೆ ಏನಿದರ ಒಳಗುಟ್ಟು ಎಂದು ಅಲೋಚಿಸುತ್ತಿದ್ದರೆ…..ಅತ್ತ ಕಾರು ಬಂದು ಪೇಟೆಗೆ ಮುಟ್ಟಿತ್ತು. ಮಧು ತನಗೆ ಬೇಕೆಂದು ಹಟ ಹಿಡಿದ ಸೌಂಧರ್ಯ ಆತ ರೋಗಿಯಾಗಿ ಮನೆಸೇರಿದಾಗ ಎಲ್ಲವನ್ನೂ ಬಿಟ್ಟು ಬೇರೆ ಹುಡಗನೊಂದಿಗೆ ನಿಶ್ಚಿತಾರ್ಥ‌ವಾಗಿ ಇದೀಗ ಮದುವೆ ದಿನವೂ ಹತ್ತಿರ ಹತ್ತಿರವಿದ್ದು ಮದುಮಗಳಿಗೆ ಡ್ರೆಸ್ ಖರೀದಿ ಮಾಡಲು ಪೇಟೆಗೆ ಬಂದರೆ,ಮಧುವನ್ನು ನೋಡಿದ ಸೌಂದರ್ಯ‌ಳಿಗೆ ಹಿಂದಿನ ದಿನದ ನೆನಪುಗಳು ಮರುಕಳಿಸಿತು.ಎಲ್ಲರೂ ಖುಷಿಯಿಂದ ತಮಗೆ ಬೇಕಾದ ಡ್ರೆಸ್ ಆಯ್ಕೆ ಮಾಡುತ್ತಿದ್ದರೆ ,ಸೌಂಧರ್ಯ ಮಾತ್ರ ಕಾರಿನಲ್ಲಿ ನೊಡಿದ ಮಧು ಮತ್ತು ಮಂಗಳಳ ಬಗ್ಗೆಯೇ ಚಿಂತಿಸುತ್ತಿದ್ದಳು.ಮದುವೆಯ ಎಲ್ಲಾ ಉಡುಗೆತೊಡುಗೆಗಳನ್ನು ಖರೀದಿಸಿ ಮತ್ತೆ ಊರಿನತ್ತ ಕಾರು ಹೊರಟಿತು,ಆಶ್ಚರ್ಯ‌ವೆಂಬಂತೆ ಮೊದಲು ಸಿಕ್ಕ ಸ್ಥಳದಲ್ಲೆ ಮತ್ತೆ ಮಧುವಿನ ಕಾರು ಎದುರಾಯಿತು.ಡ್ಯಾಡಿ ಡ್ಯಾಡಿ ಕಾರ್ ನಿಲ್ಲಿಸಿ ಎಂದು ತಂದೆಯನ್ನು ಒತ್ತಾಯಿಸಿ‌ದಾಗ ಸುಂದರ‌ರಾಯರು ಕಾರು ನಿಲ್ಲಿಸಿದರು.ಕಾರಿನಿಂದ ಇಳಿದವಳೆ ಎದುರಿನಿಂದ ಬರುತ್ತಿದ್ದ ಮಧುವಿನ ಕಾರಿಗೆ ಅಡ್ಡ ಕೈ ಹಿಡಿದು ನಿಲ್ಲಿಸುವಂತೆ ಸೂಚನೆ ಮಾಡಿದರೂ ಯಾರೋ ಪರಿಚಯ ಇಲ್ಲದವರಂತೆ ಮಧು ನಿಲ್ಲಿಸದೆ ಮುಂದಕ್ಕೆ ಪ್ರಯಾಣ ಬೆಳೆಸಿದ. ಸುಂದರರಾಯರಿಗೂ ಮಧುವನ್ನು ನೋಡಿ ಆಶ್ಚರ್ಯವಾಯಿತು.ಇತ್ತ ಸೌಂಧರ್ಯ‌ಳಿಗೆ ಮಧು ತನ್ನನ್ನು ನೋಡಿಯೂ ನೋಡದಂತೆ ಹೋಗಲು ಕಾರಣವೇನು…?ಅಷ್ಟೊಂದು ಅಹಂಕಾರವೆ…?ಎಂದವಳೆ ಕಾರಿನಲ್ಲಿ ಕುಳಿತವಳು ಕೋಪದ ಜ್ವಾಲೆ‌ಯನ್ನು ಹೊರಹಾಕುತ್ತಾ ತಂದೆಯಲ್ಲಿ ಕಾರನ್ನು ಮಂಗಳಳ ಮನೆಗೆ ತಿರುಗಿಸುವಂತೆ ಹೇಳಿದಳು…
ಏನು ತಿಳಿಯದ ಸುಂದರರಾಯರು ಮಗಳ ಮಾತಿನಂತೆ ಮಂಗಳಳ ಮನೆಯತ್ತ ಕಾರಿನ ದಾರಿಯನ್ನು ಬದಲಾಯಿಸಿದರು..
ಕಾರು ಬಂದು ಮಂಗಳಳ ಮನೆ ಅಂಗಳದಲ್ಲಿ ನಿಂತ ಧ್ವನಿಯನ್ನು ಆಲಿಸಿದ ಮಂಗಳ!ಮಧು ತಿರುಗಿ ಬಂದಿರಬಹುದೆ ಎಂದು ಒಳಗಿನಿಂದ ಅವಸರವಸರವಾಗಿ ಹೊರಗಡೆ ಬರಬೇಕಾದರೆ…..?

(ಮುಂದುವರಿಯುವುದು)

spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page