30.8 C
Udupi
Sunday, February 15, 2026
spot_img
spot_img
HomeBlogಮಂಗಳೂರು: ಪಹಲ್ಗಾಮ್ ನಲ್ಲಿ ನಡೆದ ಕೃತ್ಯವನ್ನು ಸಮರ್ಥಿಸಿಕೊಂಡು ಪೋಸ್ಟ್ ಹಾಕಿ ವಿಕೃತಿ ಮೆರೆದ ವ್ಯಕ್ತಿ …!

ಮಂಗಳೂರು: ಪಹಲ್ಗಾಮ್ ನಲ್ಲಿ ನಡೆದ ಕೃತ್ಯವನ್ನು ಸಮರ್ಥಿಸಿಕೊಂಡು ಪೋಸ್ಟ್ ಹಾಕಿ ವಿಕೃತಿ ಮೆರೆದ ವ್ಯಕ್ತಿ …!

spot_imgspot_img

ಮಂಗಳೂರು: ಏಪ್ರಿಲ್ 22ರಂದು ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‍ನಲ್ಲಿ ಹಿಂದೂಗಳ ಮೇಲೆ ನಡೆದ ನರಮೇಧ ದಾಳಿಯನ್ನು ಸಮರ್ಥಿಸಿಕೊಂಡು ಮಂಗಳೂರಿನಲ್ಲಿ ಕಿಡಿಗೇಡಿಯೊಬ್ಬ ಫೇಸ್‍ಬುಕ್‍ನಲ್ಲಿ ಪೋಸ್ಟ್ ಹಾಕಿ ವಿಕೃತಿ ಮೆರೆದಿರುವುದು ಕಂಡುಬಂದಿದೆ.

ನಿಚ್ಚು ಮಂಗಳೂರು ಎಂಬಾತ ಫೇಸ್‍ಬುಕ್ ಪೇಜ್‍ನಲ್ಲಿ, 2023ರಲ್ಲಿ ಮಹಾರಾಷ್ಟದ ಪಾಲ್ಗರ್‌ನಲ್ಲಿ ಮೂವರು ಮುಸ್ಲಿಮರನ್ನು ಕೊಲ್ಲಲಾಗಿತ್ತು. ಆರೋಪಿ ಚೇತನ್ ಸಿಂಗ್‍ಗೆ ಸಾರ್ವಜನಿಕವಾಗಿ ಹಗ್ಗ ಹಾಕಲಿಲ್ಲ. ಆ ಕಾರಣಕ್ಕೆ ಕಾಶ್ಮೀರದಲ್ಲಿ ಈ ಕೃತ್ಯ ನಡೆದಿದೆ. ಪಾಲ್ಗರ್ ಘಟನೆಯಿಂದಾಗಿ ಕಾಶ್ಮೀರದಲ್ಲಿ ಧರ್ಮ ಕೇಳಿ ಉಗ್ರರು ಹತ್ಯೆ ಮಾಡಿದ್ದಾರೆ ಎಂದು ಸಮರ್ಥನೆ ಮಾಡಿ ವಿಕೃತಿ ಮೆರೆದಿದ್ದಾನೆ.

ಆರೋಪಿ ಕೊಣಾಜೆ ಪೊಲೀಸ್ ಠಾಣಾ ವ್ಯಾಪ್ತಿಯ ನಿವಾಸಿ ಎಂದು ತಿಳಿದು ಬಂದಿದ್ದು ಉಳ್ಳಾಲದ ಸತೀಶ್ ಕುಮಾರ್ ಎಂಬವರು ಪೋಸ್ಟ್ ಹಾಕಿದ ನಿಚ್ಚು ಮಂಗಳೂರು ಫೇಸ್‍ಬುಕ್ ಪೇಜ್ ವಿರುದ್ಧ ದೂರು ನೀಡಿದ್ದಾರೆ. ಈ ಸಂಬಂಧ ಮಂಗಳೂರಿನ ಕೊಣಾಜೆ ಪೊಲೀಸ್ ಠಾಣೆಯಲ್ಲಿ ಬಿಎನ್‍ಎಸ್ ಸೆಕ್ಷನ್ 192 ಮತ್ತು 353 (1) (ಬಿ) ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ಆ ವ್ಯಕ್ತಿಗಾಗಿ ಶೋಧ ನಡೆಸಿದ್ದಾರೆ.

spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page