
ಮಂಗಳೂರು: ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಶ್ರೀರಾಮನ ಭಕ್ತರಿದ್ದು ಹೀಗಾಗಿ ಮಂಗಳೂರು-ಅಯೋಧ್ಯೆ ಮಧ್ಯೆ ನೇರ ರೈಲು ವ್ಯವಸ್ಥೆ ಆರಂಭಿಸಬೇಕು ಎಂದು ದಕ್ಷಿಣ ಕನ್ನಡ ಸಂಸದ ಕ್ಯಾ| ಬ್ರಿಜೇಶ್ ಚೌಟ ಅವರು ರೈಲ್ವೆ ಸಚಿವ ಅಶ್ವಿನಿ ವೈಷ್ಣವಿ ಅವರಿಗೆ ಪತ್ರದ ಮೂಲಕ ಮನವಿ ಸಲ್ಲಿಸಿದ್ದಾರೆ.
ದಕ್ಷಿಣ ಕನ್ನಡ ಮತ್ತು ಉಡುಪಿ ಭಾಗದ ಜನತೆ ಅಯೋಧ್ಯೆ ಕ್ಷೇತ್ರದ ಬಗ್ಗೆ ಪ್ರಾಚೀನ ಕಾಲದಿಂದಲೂ ಅಪಾರ ಶ್ರದ್ಧೆ ಹೊಂದಿದ್ದು ಪ್ರಸ್ತುತ ಈ ಭಕ್ತರು ಬೆಂಗಳೂರು ಅಥವಾ ಇತರ ಮಾರ್ಗಗಳ ಮೂಲಕ ಅಯೋಧ್ಯೆಗೆ ತೆರಳಲು 40 ಗಂಟೆಗಳಿಗೂ ಅಧಿಕ ಸಮಯ ಬೇಕಾಗುತ್ತದೆ. ಹೀಗಾಗಿ ನೇರ ರೈಲು ಸಂಪರ್ಕವಿದ್ದರೆ ಕರಾವಳಿ ಮತ್ತು ಮಲೆನಾಡಿನವರಿಗೆ ಅನುಕೂಲವಾಗಲಿದ್ದು ಈ ಹಿನ್ನೆಲೆಯಲ್ಲಿ ವಾರಕ್ಕೆ ಒಮ್ಮೆ ಅಥವಾ ಎರಡು ಬಾರಿ ಮಂಗಳೂರು ಮತ್ತು ಅಯೋಧ್ಯೆ ನಡುವೆ ನೇರ ರೈಲು ವ್ಯವಸ್ಥೆ ಆರಂಭಿಸಬೇಕು ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.