ಶಾರದಾ ಮಠಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಬಂದ್

ಕರಾವಳಿ ಜಿಲ್ಲೆಗಳಲ್ಲಿ ವಿಪರೀತ ಮಳೆ ಸುರಿಯುತ್ತಿದ್ದು,ಪಶ್ಚಿಮ ಘಟ್ಟ ಸಾಲಿನಲ್ಲಿ ಮಳೆ ಧಾರಾಕಾರವಾಗಿ ಸುರಿಯುತ್ತಿದೆ.ತುಂಗಾ ನದಿ ಉಕ್ಕಿ ಹರಿಯುತ್ತಿದ್ದು, ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ಶಾರದಾ ಮಠಕ್ಕೆ ಸಂಪರ್ಕಿಸುವ ಪರ್ಯಾಯ ರಸ್ತೆ ಜಲಾವೃತಗೊಂಡು ಬಂದ್ ಆಗಿದೆ
ತುಂಗಾ ನದಿ ತೀರದಲ್ಲಿರುವ ನರಸಿಂಹವನದ ಬಳಿ ಇರುವ ಶೃಂಗೇರಿ ಮಠದ ಸಂಧ್ಯಾವಂದನೆ ಮಂಟಪದ ಒಳಗೂ ನೀರು ಹೊಕ್ಕಿದೆ. ಸಂಧ್ಯಾವಂದನೆ ಮಂಟಪ ಸಂಪೂರ್ಣ ಮುಳುಗುವ ಹಂತಕ್ಕೆ ತಲುಪಿದ್ದು, ಕೇವಲ ಮೂರು ಅಡಿಯಷ್ಟು ಬಾಕಿ ಇದೆ. ಶೃಂಗೇರಿ ಶಾರದಾ ಮಠದ ಸುತ್ತಮುತ್ತಲಿನ ಪ್ರದೇಶಗಳು ಜಲಾವೃತಗೊಂಡಿವೆ.








